ಹೊಸದಿಗಂತ ವರದಿ,ಅಂಕೋಲಾ:
ಜಿ.ಪಿ.ಎಸ್ ಆದಂತ ಅರಣ್ಯ ಪ್ರದೇಶದ ವಾಸಿಗಳಿಗೆ ಸರ್ಕಾರದ ಸವಲತ್ತುಗಳು ದೊರಕಿಸಿಕೊಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಿ ವಿಶೇಷ ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ, ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವ ಬಡ ಜನರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು ಎಂಬುದು ತಮ್ಮ ಆಶಯವಾಗಿದ್ದು ಅದಕ್ಕಿರುವ ತೊಡಕುಗಳನ್ನು ನಿವಾರಿಸುವತ್ತ ಸತತ ಪ್ರಯತ್ನ ಸಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಹೇಳಿದರು.
ಪ್ರವಾಹ ಪೀಡಿತ ಅರಣ್ಯ ಅತಿಕ್ರಮಣ ನಿವಾಸಿಗಳಿಗೆ ಪರಿಹಾರದ ಕುರಿತಂತೆ
ಮಾದ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಹೆಬ್ಬಾರ್ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಅವರಿಗೆ ಪರಿಹಾರ ನೀಡಲಾಗಿದೆ ಆದರೆ ಅರಣ್ಯ ವಾಸಿಗಳಿಗೆ ಆರ್.ಟಿ.ಸಿ ಇಲ್ಲದ ಕಾರಣ ಇತರ ಪರಿಹಾರಗಳನ್ನು ನೀಡುವುದಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳು ಉದ್ಬವಿಸಿವೆ ಈ ಕುರಿತು ಮುಖ್ಯ ಮಂತ್ರಿಗಳ ಜೊತೆ ನಿರಂತರವಾಗಿ ಚರ್ಚೆ ನಡೆಯುತ್ತಿದೆ
ಜಿ.ಪಿ.ಎಸ್ ಆದಂತ ಅತಿಕ್ರಮಣದಾರರಿಗೆ ಪ್ರವಾಹ ಸಂಬಂದಿತ ಪರಿಹಾರ ಹಾಗೂ ಇತರೆ ಸರ್ಕಾರಿ ಸವಲತ್ತು ದೊರಕಿಸಿಕೊಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದರು