ಬೇಟೆಗಾರ ಕೊಂದ ದೈತ್ಯ ಮೊಸಳೆ ಹೊಟ್ಟೆಯಲ್ಲಿ ಸಿಕ್ಕಿತು ಪುಟ್ಟ ಬಾಲಕನ ದೇಹದ ಅವಶೇಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನದಿಯತ್ತ ತೆರಳಿದ್ದ ಶಾಲಾ ಬಾಲಕನನ್ನು ಪೋಷಕರ ಎದುರೇ ಮೊಸಳೆಯೊಂದು ನೀರಿನ ಆಳಕ್ಕೆ ಎಳೆದುಕೊಂಡು ಹೋಗಿ ಕಬಳಿದ ಘಟನೆ ಕೊಸ್ಟರಿಕಾದ ಮಟಿನಾ ನದಿಯಲ್ಲಿ ತಿಂಗಳ ಹಿಂದೆ ನಡೆದಿತ್ತು. ಇದೀಗ ಮೊಸಳೆ ಹೊಟ್ಟೆಯಲ್ಲಿ ಬಾಲಕನ ಅವಶೇಷ ಪತ್ತೆಯಾಗಿದೆ  ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಜೂಲಿಯೊ ಒಟೆರೊ ಫೆರ್ನಾಂಡಿಸ್ ಎಂಬ ಹೆಸರಿನ ಬಾಲಕ 8 ವರ್ಷದ ಬಾಲಕ ಲಿಮನ್ ನಗರದ ಮಟಿನಾ ನದಿಗೆ ಮೀನುಗಾರಿಕೆ ಪ್ರವಾಸಕ್ಕೆ ಹೋಗಿದ್ದ ವೇಳೆ ತನ್ನ ಹೆತ್ತವರು, ನಾಲ್ವರು ಒಡಹುಟ್ಟಿದವರು ಮತ್ತು ಇತರ ಸಂಬಂಧಿಕರೊಂದಿಗೆ ಸಮಯ ಕಳೆಯುತ್ತಿದ್ದಾಗ ಕೊಲ್ಲಲ್ಪಟ್ಟಿದ್ದ. ಅಕ್ಟೋಬರ್ 30 ರಂದು ಮಧ್ಯಾಹ್ನ 2 ಗಂಟೆಗೆ, ಜೂಲಿಯೊ ನದಿಯಲ್ಲಿ ಮೊಣಕಾಲು ಆಳದ ನೀರಿನಲ್ಲಿ ನಿಂತಿದ್ದಾಗ ದೊಡ್ಡ ಮೊಸಳೆ ಅವನತ್ತ ನುಗ್ಗಿತು.  ಆತನಿಗೆ ಅಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಮುನ್ನವೇ ಮೊಸಳೆ ಆತನ ತಲೆ ಕತ್ತರಿಸಿ ನೀರಿನಾಳಕ್ಕೆ ಎಳೆದೊಯ್ದಿದೆ. ಮಗುವಿನ ಭೀಕರ ಸಾವಿನ ಒಂದು ತಿಂಗಳಿನ ಬಳಿಕ ಅಪರಿಚಿತ ಬೇಟೆಗಾರನೊಬ್ಬ ಆ ಪ್ರದೇಶದಲ್ಲಿ ಮೊಸಳೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಸ್ಥಳೀಯರು ಮೃಗದ ಹೊಟ್ಟೆಯನ್ನು ತೆರೆದಾಗ, ಅದರಲ್ಲಿ ಜೂಲಿಯೊಗೆ ಸೇರಿದ್ದೆಂದು ನಂಬಲಾದ ಕೂದಲಿನ ಎಳೆಗಳು ಮತ್ತು ಮೂಳೆ ತುಣುಕುಗಳು ಕಂಡುಬಂದಿವೆ.
“ಅದು ಅವನನ್ನು (ಮಗುವನ್ನು) ಬೆಚ್ಚಿಬೀಳಿಸಿತು ಮತ್ತು ಅವನ ಪುಟ್ಟ ತಲೆಯನ್ನು ಕಿತ್ತುಹಾಕಿತು” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮೊಸಳೆ ಕ್ರೂರ ದಾಳಿಯನ್ನು ವಿವರಿಸಿದರು. “ನಂತರ ಅದು ಅವನನ್ನು ಮತ್ತೆ ಹಿಡಿದು ಕೆಳಗೆ ಎಳೆದುಕೊಂಡಿತು.”
ಜೂಲಿಯೊ ಅವರ ಪೋಷಕರು, ಡಾನ್ ಜೂಲಿಯೊ ಒಟೆರೊ ಮತ್ತು ಮಾರ್ಗಿನಿ ಫೆರ್ನಾಂಡಿಸ್ ಫ್ಲೋರೆಸ್, ತಮ್ಮ ಮಗನನ್ನು ಮೊಸಳೆ ಘೋರವಾಗಿ ಸಾಯಿಸುತ್ತಿರುವುದನ್ನು ಅಸಹಾಯಕತೆಯಿಂದ ನೋಡುತ್ತಿದ್ದರು. “ಅಲ್ಲಿ ಮೊಸಳೆಗಳು ಮತ್ತು ಬಿಲಗಳಿದ್ದವು ಎಂಬುದು ನಮಗೆ ಗೊತ್ತಿತ್ತು. ಆದರೆ ಮಗುವನ್ನು ಹೊತ್ತೊಯ್ಯುತ್ತದೆ ಎಂಬ ಕಲ್ಪನೆಯೇ ಇರಲಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ. ಇದೀಗ ಜೂಲಿಯೊ ಅವಶೇಷಗಳು ಅದರ ಹೊಟ್ಟೆಯಲ್ಲಿ ಪತ್ತೆಯಾಗಿದ್ದು ಜನರನ್ನು ಬೆಚ್ಚಿಬೀಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!