ಭಾರೀ ಸದ್ದು ಮಾಡ್ತಿದ್ದ ಕ್ರಿಪ್ಟೋಗೆ ಈಗ ಸಂಕಷ್ಟ ಕಾಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಳೆದ ಕೆಲವು ತಿಂಗಳ ಹಿಂದಿನವರೆಗೂ ಭಾರೀ ಪ್ರಮಾಣದಲ್ಲಿ ಸದ್ದು ಮಾಡ್ತಿದ್ದ ಕ್ರಿಪ್ಟೋ ಮಾರುಕಟ್ಟೆಯು ಈಗ ಸಂಕಷ್ಟದಲ್ಲಿ ಸಿಲುಕಿದೆ. ಡಿಜಿಟಲ್‌ ಕರೆನ್ಸಿ ಮಾರುಕಟ್ಟೆ ಕುಸಿಯುತ್ತಿರುವುದರಿಂದ ಕ್ರಿಪ್ಟೋ ಎಕ್ಸ್‌ಚೇಂಜ್ ಕಾಯಿನ್‌ಬೇಸ್ ತನ್ನ 18 ಶೇಕಡಾದಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ.

ಇದರ ಕುರಿತು ಕ್ರಿಪ್ಟೋ ಎಕ್ಸ್‌ಚೇಂಜ್ ಸಿಇಒ ಬ್ರಿಯಾನ್ ಆರ್ಮ್‌ಸ್ಟ್ರಾಂಗ್ 4,900ಉದ್ಯೋಗಿಗಳಲ್ಲಿ 1,000 ಉದ್ಯೋಗಿಗಳನ್ನು ಹೊರಹಾಕುತ್ತಿರುವುದಾಗಿ ಹೇಳಿದ್ದಾರೆ. “ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಇಂತಹ ಕಠಿಣ ನಿರ್ಧಾರ ತೆಗೆಕೊಳ್ಳಲಾಗಿದೆ” ಎಂದು ಪತ್ರವೊಂದರಲ್ಲಿ ಉಲ್ಲೇಖಿಸಿದ್ದಾರೆ.

ಕ್ರಿಪ್ಟೊ ಮಾರುಕಟ್ಟೆಯಲ್ಲಿನ ಇತ್ತೀಚಿನ ಬೇರಿಷ್‌ (ಕುಸಿತ) ಟ್ರೆಂಡ್‌ ಕುರಿತು ಎಚ್ಚರಿಸಿರುವ ಅವರು “ಜಾಗತಿಕ ಆರ್ಥಿಕ ಹಿಂಜರಿತವು ಕ್ರಿಪ್ಟೋ ಮಾರುಕಟ್ಟೆಯ ಮೇಲೂ ಋಣಾತ್ಮಕ ಪರಿಣಾಮ ಬೀರಿದೆ. ಈ ಹಿಂಜರಿತದ ಅವಧಿಯು ಇನ್ನೂ ವಿಸ್ತರಿಸಲಿದೆ. ಭವಿಷ್ಯದ ಆರ್ಥಿಕ ಪರಿಸ್ಥಿತಿಗಳನ್ನು ಊಹಿಸಲು ಕಷ್ಟ ಸಾಧ್ಯ. ಆದರೂ ಉತ್ತಮ ವ್ಯವಹಾರಿಕ ಪರಿಸರ ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಹಣದುಬ್ಬರವನ್ನು ನಿಭಾಯಿಸಲು ಬಡ್ಡಿದರಗಳನ್ನು ಇನ್ನೂ ಏರಿಸುವ ನಿರೀಕ್ಷೆಯಿರುವುದರಿಂದ ಬಹುತೇಕ ಕ್ರಿಪ್ಟೋ ಹೂಡಿಕೆದಾರರು ಕ್ರಿಪ್ಟೋವನ್ನು ಮಾರಾಟ ಮಾಡುತ್ತಿದ್ದಾರೆ. ಇದು ಕ್ರಿಪ್ಟೋ ಮಾರುಕಟ್ಟೆ ಸ್ಫೋಟಕ್ಕೆ ಕಾರಣವಾಗಿದ್ದು ಜಾಗತಿಕ ವಾಗಿ ಕ್ರಿಪ್ಟೋ ಮಾರುಕಟ್ಟೆಯು ಗಣನೀಯವಾಗಿ ಕುಸಿತ ಕಂಡಿದ್ದು ಇದು ಇನ್ನೂ ಹೆಚ್ಚಿನ ಅವಧಿಯ ವರೆಗೆ ಮುಂದುವರೆಯಬಹುದು ಎಂದು ಊಹಿಸಲಾಗಿದೆ.

ಇದರ ನಡುವೆಯೇ ಕಾಯಿನ್‌ ಬೇಸ್‌ ಶೇರು ಮೌಲ್ಯವು 80-85% ದಷ್ಟು ಕುಸಿದಿದ್ದು 100 ಬಿಲಿಯನ್‌ ಡಾಲರ್‌ ಮೌಲ್ಯದ ಕಂಪನಿಯು ಈಗ 12ಬಿಲಿಯನ್‌ ಡಾಲರ್‌ಗೆ ಕುಸಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!