ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಭಾರೀ ಏಕಪಕ್ಷೀಯ ಫಲಿತಾಂಶ ಕಂಡುಬಂದಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಅವಮಾನಕರ ಸೋಲು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 103 ರನ್‌ಗಳ ಅಂತರದಲ್ಲಿ ಸೋತು, ಮುಂಬೈ ತನ್ನ ಇತಿಹಾಸದಲ್ಲೇ ಅತಿ ಕೆಟ್ಟ ಸೋಲನ್ನು ದಾಖಲಿಸಿತು. 207 ರನ್ ಗುರಿ ಬೆನ್ನಟ್ಟಿದ ಮುಂಬೈ ಕೇವಲ 104 ರನ್‌ಗಳಿಗೆ ಆಲೌಟ್ ಆಯಿತು.
ಪಂದ್ಯದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಸೋಲಿಗೆ ಕಾರಣವಾಗಿ ಬ್ಯಾಟಿಂಗ್ ವೈಫಲ್ಯವನ್ನು ಉಲ್ಲೇಖಿಸಿದರು. ಪಿಚ್ ಬಗ್ಗೆ ಕಾರಣ ನೀಡಲು ನಿರಾಕರಿಸಿದ ಅವರು, ಚೆನ್ನೈ ಇದೇ ಪಿಚ್‌ನಲ್ಲಿ ಉತ್ತಮವಾಗಿ ಆಡಿತು, ನಾವು ಅವಕಾಶ ಬಳಸಿಕೊಳ್ಳಲಿಲ್ಲ ಎಂದರು.
ಇದನ್ನೂ ಓದಿ:
ಅದೇ ವೇಳೆ ಸಂಜು ಸ್ಯಾಮ್ಸನ್ ಅವರ ಶತಕದ ಆಟವನ್ನು ಮೆಚ್ಚಿಕೊಂಡು, ಅವರ ಇನ್ನಿಂಗ್ಸ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು ಎಂದು ಹೇಳಿದರು. ಪವರ್‌ಪ್ಲೇಯಲ್ಲಿ ಉತ್ತಮ ಆರಂಭ ಸಿಗದಿರುವುದೇ ಸೋಲಿಗೆ ಕಾರಣವೆಂದು ಪಾಂಡ್ಯ ಅಭಿಪ್ರಾಯಪಟ್ಟಿದ್ದಾರೆ.



