Saturday, April 1, 2023

Latest Posts

ಸಿಟಿಇಟಿ ಪ್ರವೇಶ ಪತ್ರ 2023 : ಪರಿಷ್ಕೃತ ಪರೀಕ್ಷಾ ದಿನಾಂಕಗಳ ಪ್ರವೇಶ ಪತ್ರ ಔಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಸಿಟಿಇಟಿ ಪರಿಷ್ಕೃತ ಪರೀಕ್ಷಾ ದಿನಾಂಕಗಳ ಪ್ರವೇಶ ಪತ್ರ 2023 ಅನ್ನು ಬಿಡುಗಡೆ ಮಾಡಿದೆ. ಪರೀಕ್ಷಾರ್ಥಿಗಳು ಇದೀಗ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಜನವರಿ 11, 18 ಮತ್ತು 24, 2023 ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ತಾಂತ್ರಿಕ ಸಮಸ್ಯೆಗಳಿಂದ ಕೆಲವು ಕೇಂದ್ರಗಳಲ್ಲಿ ನಡೆಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡುವುದು ಹೇಗೆ ತಿಳಿಯಿರಿ.

ಸಿಟಿಇಟಿ ಪ್ರವೇಶ ಕಾರ್ಡ್ 2023: ಡೌನ್‌ಲೋಡ್ ಮಾಡುವುದು ಹೇಗೆ ?

* ಮೊದಲು ಅಧಿಕೃತ ವೆಬ್‌ಸೈಟ್‌ ctet.nic.in ಗೆ ಭೇಟಿ ನೀಡಿ.
* ಮುಖಪುಟದಲ್ಲಿ ಲಭ್ಯವಿರುವ CTET ಅಡ್ಮಿಟ್ ಕಾರ್ಡ್ 2023 ಲಿಂಕ್ ಅನ್ನು ಕ್ಲಿಕ್ ಮಾಡಿ.
* ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸು ಬಟನ್‌ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಪ್ರವೇಶ ಪತ್ರವು ಪರದೆಯ ಮೇಲೆ ಮೂಡುತ್ತದೆ.
* ಪ್ರವೇಶ ಪತ್ರದಲ್ಲಿನ ವಿವರಗಳನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್‌ಲೋಡ್ ಮಾಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!