ಅಸಾನಿ ಎಫೆಕ್ಟ್: ಹಲವೆಡೆ ವಿಮಾನ ಹಾಗೂ ರೈಲು ಸಂಚಾರ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಸಾನಿ ಚಂಡಮಾರುತದಿಂದಾಗಿ ಕರಾವಳಿ ರಾಜ್ಯಗಳು ತತ್ತರಿಸಿವೆ. ಭಾರೀ ಗಾಳಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಅಸಾನಿ ಚಂಡಮಾರುತ ವಿಮಾನ ನಿಲ್ದಾಣದ ಕಾರ್ಯಾಚರಣೆಗಳ ಮೇಲೆ ತೀವ್ರ ಪ್ರಭಾವ ಬೀರಿದೆ. ಈಗಾಗಲೇ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇನ್ನು ಕೆಲವು ವಿಮಾನಗಳ ಮಾರ್ಗ ಬದಲಾವಣೆಯಾಗಿದೆ. ಮಂಗಳವಾರದವರೆಗೆ 19 ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿತ್ತು. ಬುಧವಾರ, ಇಂಡಿಗೋ ಸಂಸ್ಥೆ 23 ವಿಮಾನಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ದೆಹಲಿ-ವಿಶಾಖಪಟ್ಟಣಂ, ಬೆಂಗಳೂರು-ವಿಶಾಖಪಟ್ಟಣಂ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಏರ್ ಇಂಡಿಯಾ ಮುಂಬೈ-ರಾಯಪುರ ಮತ್ತು ವಿಶಾಖಪಟ್ಟಣ-ದೆಹಲಿ ಸೇವೆಗಳನ್ನು ರದ್ದುಗೊಳಿಸಿದೆ. ವಿಮಾನಗಳು ಲ್ಯಾಂಡಿಂಗ್‌ ಆಗಲು ಪ್ರತಿಕೂಲ ಹವಾಮಾನ ಕಾರಣ ಎಂದು ಏರ್‌ಪೋರ್ಟ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ದಕ್ಷಿಣ ಮಧ್ಯ ರೈಲ್ವೆ ಬುಧವಾರ ಒಟ್ಟು 37 ರೈಲುಗಳನ್ನು ರದ್ದುಗೊಳಿಸಲಾಗಿದೆ. ಕೆಲವನ್ನು ರಿಷೆಡ್ಯೂಲ್‌ ಮಾಡಲಾಗಿದೆ. ವಿಜಯವಾಡ-ಮಚಿಲಿಪಟ್ಟಣಂ, ಮಚಿಲಿಪಟ್ಟಣಂ-ವಿಜಯವಾಡ, ವಿಜಯವಾಡ-ನರಸಾಪುರ, ನರಸಾಪುರ-ನಿಡದವೋಲು, ನಿಡದವೋಲು-ನರಸಾಪುರ, ನರಸಾಪುರ-ವಿಜಯವಾಡ, ವಿಜಯವಾಡ-ನರಸಾಪುರ, ನಿಡದವೋಲು-ಭೀಮಾವರಂ ಜಂಕ್ಷನ್, ಭೀಮಾವರಂ ಜಂಕ್ಷನ್- ಮಚಲಿಪಟ್ಟಣಂ-ಗುಡಿವಾಡ, ಭೀಮಾವರಂ ಜಂಕ್ಷನ್-ಮಚಿಲಿಪಟ್ಟಣಂ, ಗುಡಿವಾಡ-ಮಚಿಲಿಪಟ್ಟಣಂ, ನರಸಾಪುರ-ಗುಂಟೂರು, ಗುಂಟೂರು-ನರಸಾಪುರ, ಕಾಕಿನಾಡ ಬಂದರು-ವಿಜಯವಾಡ ರೈಲುಗಳು ರದ್ದಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!