ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಂಧಿಗಿರಿ ನಡೆಯಬೇಕಾದ ಕಾಲದಲ್ಲಿ ದಾದಾಗಿರಿ ನಡೆಯುತ್ತಿದೆ. ಅದಕ್ಕೆ ತಾಜಾ ಉದಾಹರಣೆ ನನ್ನ ಹಾಗೂ ಮುನಿರತ್ ಮೇಲೆ ನಡೆದ ಹಲ್ಲೆ ಎಂದು ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಮುನಿರತ್ ನಿವಾಸಕ್ಕೆ ಆಗಮಿಸಿ ಆರೋಗ್ಯ ವಿಚಾರಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಇದು ಬಹಳ ದಿನ ನಡೆಯುವುದಿಲ್ಲ. ಕಾಂಗ್ರೆಸ್ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಮುನಿರತ್ನ ಮೇಲಿನ ಹಲ್ಲೆ ದುರದೃಷ್ಟಕರ. ಪ್ರಜಾಪ್ರಭುತ್ವದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಹೀಗಾಗಬಾರದು ಎಂದರು.
ನನ್ನ ದೃಷ್ಟಿಕೋನವನ್ನು ಮೂರು ಆಯಾಮಗಳಲ್ಲಿ ಪರಿಗಣಿಸಬೇಕು. ಆರ್ಟಿಕಲ್ 194 ರ ಪ್ರಕಾರ, ಹೆಚ್ಚಿನ ಅಧಿಕಾರವು ಸ್ಪೀಕರ್‌ಗೆ ಇರುತ್ತದೆ. ಅಧ್ಯಕ್ಷರ ನಿರ್ಧಾರ ಅವರ ಜವಾಬ್ದಾರಿಯಾಗಿದೆ. ಆದರೆ ಈ ಸರ್ಕಾರ ಕಾನೂನನ್ನು ದುರ್ಬಳಕೆ ಮಾಡಿಕೊಂಡಿದೆ. ನನಗೆ ನೋಟಿಸ್ ಕೊಟ್ಟಿರಲಿಲ್ಲ, ಬಂಧಿಸಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ದೂರಿದ್ದಾರೆ.