November 3, 2026
Tuesday, November 3, 2026
spot_img

ದಿನಭವಿಷ್ಯ | ವೃತ್ತಿ ಜೀವನದಲ್ಲಿ ಬದಲಾವಣೆ ಅಗತ್ಯ, ಕುಟುಂಬದಲ್ಲಿ ಮಿಶ್ರಫಲ

ಮೇಷ.
ಏಕತಾನತೆಯ ಕೆಲಸ ಬೇಸರ ಹುಟ್ಟಿಸಬಹುದು. ಹೊಸಬಗೆಯ ಕಾರ್ಯಕ್ಕೆ ತೊಡಗಿ. ಸಂಗಾತಿ ಜತೆ ಭಿನ್ನಾಭಿಪ್ರಾಯ. ಮಕ್ಕಳ ಸಾಧನೆಯ ತೃಪ್ತಿ.
ವೃಷಭ
ಇತರರ ಸಮಸ್ಯೆ ನಿಮ್ಮ ಮೈಮೇಲೆ ಎಳೆದುಕೊಳ್ಳಬೇಡಿ. ಸಂಗಾತಿ ಜತೆಗೆ ಅನವಶ್ಯ ವಿರಸವನ್ನು ತಪ್ಪಿಸಿ. ಆರ್ಥಿಕ ಉನ್ನತಿ. 
ಮಿಥುನ
ವೃತ್ತಿಯಲ್ಲಿ ಸಾಫಲ್ಯ. ಅನ್ಯರಿಂದ ಮೆಚ್ಚುಗೆ. ಕುಟುಂಬಕ್ಕೂ ಸಮಯ ಕೊಡಿ. ಹಣದ ಸಮಸ್ಯೆ ಪರಿಹಾರ ಕಾಣಲಿದೆ. ಬಂಧು ಭೇಟಿಯ ಸಂತಸ.
ಕಟಕ
ಕುಟುಂಬದಲ್ಲಿ ಭಿನ್ನಮತ. ಸಂಬಂಧದಲ್ಲಿ ಒಡಕು. ಹಿರಿಯರ ಮಾತಿಗೆ ಕೋಪ ಮಾಡದಿರಿ. ಸಮಾಧಾನದ ವರ್ತನೆ ಒಳ್ಳೆಯದು.
ಸಿಂಹ
ಒತ್ತಡದ ದಿನ. ಎಂದಿಗಿಂತ ಹೆಚ್ಚೇ ಕೆಲಸದ ಹೊರೆ. ಆದರೆ ನಿಮ್ಮ ದೃಢ ನಡೆ ಸಂಕಷ್ಟ ನಿವಾರಿಸಲಿದೆ. ಇತರರ ಸಹಕಾರ ಲಭ್ಯ. ಆಹಾರ ಪಥ್ಯ ಪಾಲಿಸಿರಿ.
ಕನ್ಯಾ
ಕಠಿಣ ಪರಿಶ್ರಮ ದಿಂದ ಯಶಸ್ಸು. ಆರ್ಥಿಕ ಪರಿಸ್ಥಿತಿ ಸಾಧಾರಣ. ವೃತ್ತಿ ಸಂಬಂಽತ ಸಮಸ್ಯೆ ಪರಿಹಾರದಿಂದ ನೆಮ್ಮದಿ. ಶೀತಬಾಧೆ ಕಾಡಬಹುದು.
ತುಲಾ
ಸಂವಹನ ಕೊರತೆ. ಇದರಿಂದ ಆಪ್ತರ ಜತೆಗಿನ ಸಂಬಂಧ ಕೆಡಬಹುದು. ಬಿಗುಮಾನ ಬಿಟ್ಟು ಹೊಂದಾಣಿಕೆಯಿಂದ ವರ್ತಿಸಿ. ವಿತ್ತ ಲಾಭ.
ವೃಶ್ಚಿಕ
ಆರ್ಥಿಕ ವ್ಯವಹಾರ ಸುಲಲಿತ. ಖಾಸಗಿ ಚಿಂತೆ ಪರಿಹಾರ. ಮನೆಯಲ್ಲಿ ರೋಷದ ಮಾತು ಆಡಬೇಡಿ. ಸಮಾಧಾನ ಮನಸ್ಥಿತಿ ಒಳಿತು.
ಧನು
 ದಿನದ ಆರಂಭದಲ್ಲಿ ತುಸು ಹಿನ್ನಡೆ. ಆದರೆ ಬಳಿಕ ಪ್ರಗತಿ ಕಾಣಲಿದೆ. ಸಹೋದ್ಯೋಗಿಗಳ ಜತೆ ವಾಗ್ವಾದ ಮಾಡದಿರಿ. ವೃಥಾ ನೆಮ್ಮದಿ ಹಾಳು.
ಮಕರ
 ವೃತ್ತಿಯಲ್ಲಿ ತಾಳ್ಮೆ ಕೆಡಿಸುವ ಪ್ರಸಂಗ. ಗುರಿಯಿಂದ ವಿಚಲಿತ ಆಗದಿರಿ. ಗಂಟಲು ಅಥವಾ ತಲೆನೋವಿನ ಸಮಸ್ಯೆ ಬಾಧಿಸಬಹುದು.  
ಕುಂಭ
ನಿಮ್ಮ ಮುಕ್ತ ಮಾತು ಒಳಿತಿಗೂ, ಸಮಸ್ಯೆಗೂ ಕಾರಣವಾಗಬಹುದು. ಸಂದರ್ಭ ನೋಡಿಕೊಂಡು ಮಾತನಾಡಿ. ಆರ್ಥಿಕ ಚೇತರಿಕೆ.
ಮೀನ
ಎಲ್ಲರ ಜತೆ ಇಂದು ಸೌಹಾರ್ದ ಬೆಳೆಸುವಿರಿ. ನಿಮ್ಮ ಉಲ್ಲಾಸದ ಮನಸ್ಥಿತಿ ಅದಕ್ಕೆ ಕಾರಣ. ಕೌಟುಂಬಿಕ ಕಿರಿಕಿರಿ ಪರಿಹಾರ. ಆಪ್ತ ಬಂಧುವಿನ ಭೇಟಿ.

Must Read