ಮೇಷ
ಆರ್ಥಿಕ ಉನ್ನತಿ. ಮನೆಯಲ್ಲಿ ಶಾಂತ ವಾತಾವರಣ. ಮಧ್ಯಾಹ್ನದ ವೇಳೆ ಉತ್ಸಾಹದ ಖುಷಿ ಸಿಗುವುದು. ವೃತ್ತಿ ಕ್ಷೇತ್ರದಲ್ಲಿ ಕೆಲವರು ನಿಮ್ಮ ವಿರುದ್ಧವಾಗಿ ವರ್ತಿಸುವ ಸಾಧ್ಯತೆಯಿದೆ.
ವೃಷಭ
ಹೆಚ್ಚು ಹಣ ತರುವ ಯೋಜನೆಗೆ ಕೈಹಾಕುವ ಮುನ್ನ ಸರಿಯಾಗಿ ವಿವೇಚಿಸಿ. ಆತುರದ ತೀರ್ಮಾನ ಬೇಡ. ಕೌಟುಂಬಿಕ ಬಿಕ್ಕಟ್ಟು ನೆಮ್ಮದಿ ಕೆಡಿಸಬಹುದು.
ಮಿಥುನ
ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ. ಹೊಟ್ಟೆ ಕೆಡುವ ಸಾಧ್ಯತೆ ಕಾಣುತ್ತಿದೆ. ಸಂಗಾತಿ ಜತೆ ಭಿನ್ನಾಭಿಪ್ರಾಯ ಉಂಟಾಗ ಬಹುದು.
ಕಟಕ
ಆಪ್ತರ ನಡುವೆ ಭಿನ್ನಮತ, ವಾಗ್ವಾದ ಉಂಟಾದೀತು. ಸಹನೆಯಿಂದ ವರ್ತಿಸಿ. ಆರ್ಥಿಕ ಒತ್ತಡ ಹೆಚ್ಚಲಿದೆ, ಖರ್ಚು ಅಽಕ.
ಸಿಂಹ
ಮನೆಯಲ್ಲಿ ಅಶಾಂತಿ ಮೂಡಿದರೂ ನಿಮ್ಮ ಪ್ರಯತ್ನದಿಂದ ಸಹಜ ಸ್ಥಿತಿ ನೆಲೆಸಲಿದೆ. ಮನಸ್ಸು ಕೆಡಿಸುವ ಪ್ರಸಂಗ ಸಂಭವಿಸಬಹುದು.
ಕನ್ಯಾ
ಕಡಿಮೆ ಅವಽ ಯಲ್ಲಿ ಹೆಚ್ಚು ಕೆಲಸ ನಿರ್ವಹಿಸುವಿರಿ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಸಾಧ್ಯತೆ. ವೃತ್ತಿಯಲ್ಲಿ ಹೆಚ್ಚುವರಿ ಹೊಣೆಗಾರಿಕೆ.
ತುಲಾ
ಸಣ್ಣಪುಟ್ಟ ಜಗಳದಿಂದ ದೂರವಿರಿ. ಹೆಚ್ಚು ಕೆಲಸದಿಂದ ಮಾನಸಿಕ ಒತ್ತಡ. ಆರ್ಥಿಕ ಸಂಪಾದನೆ ಸುಲಭಸಾಧ್ಯ. ಖರ್ಚೂ ಹೆಚ್ಚಲಿದೆ.
ವೃಶ್ಚಿಕ
ಆತ್ಮೀಯರ ಜತೆ ಕಾಲ ಕಳೆಯಿರಿ. ಅವರನ್ನು ಕಡೆಗಣಿಸಬೇಡಿ. ವೃತ್ತಿ ಚಿಂತೆಯನ್ನು ಮನೆಗೆ ತರಬೇಡಿ. ಖರ್ಚು ಹೆಚ್ಚಳದ ಚಿಂತೆ.
ಧನು
ಮೇಲಽಕಾರಿ ಜತೆ ವಾಗ್ವಾದ ನಡೆದೀತು. ಕೋಪದಿಂದ ಪ್ರತಿಕ್ರಿಯೆ ನೀಡಬೇಡಿ. ಹಿತಶತ್ರುಗಳ ಕುರಿತು ಎಚ್ಚರಿಕೆಯಿಂದ ಇರಿ. ಧನವ್ಯಯ.
ಮಕರ
ಮನೆಯಲ್ಲಿ ಶಾಂತಿಯ ವಾತಾವರಣ ಇಟ್ಟುಕೊಳ್ಳಿ. ಸಣ್ಣ ವಿಷಯಕ್ಕೆ ದುಡುಕಿ ಪ್ರತಿಕ್ರಿಯಿಸಬೇಡಿ. ವೃತ್ತಿಯಲ್ಲಿ ಒತ್ತಡ ಹೆಚ್ಚು..
ಕುಂಭ
ಸರಿಯಾದ ಸಮಯಕ್ಕೆ ಕೆಲಸ ಪೂರೈಸಲು ಸಾಧ್ಯ ವಾಗದು. ಹಲವಾರು ಅಡ್ಡಿಗಳು. ಆತ್ಮೀಯರಿಂದ ಟೀಕೆ ಕೇಳುವಿರಿ.
ಮೀನ
ನಿಮ್ಮ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಲಿ. ಇಲ್ಲವಾದರೆ ಸಮಸ್ಯೆಗೆ ಸಿಲುಕುವಿರಿ. ನಯವಂಚಕರ ಮಾತು ನಂಬಬೇಡಿ.



