ಮೇಷ
ವೈಯಕ್ತಿಕ ಗುರಿ ಸಾಧಿಸಲು ಹೆಚ್ಚು ಆದ್ಯತೆ ಕೊಡುವಿರಿ. ಆದರೆ ಆಂಶಿಕ ಸಫಲತೆ. ಸ್ವಲ್ಪ ಮಟ್ಟಿನ ಹತಾಶೆ, ಅಸಹನೆ ಉಂಟಾದೀತು.
ವೃಷಭ
ಸಾಧನೆಯ ದಿನ. ಯೋಚಿಸಿದ ಕಾರ್ಯದಲ್ಲಿ ಸಫಲತೆ. ಕೌಟುಂಬಿಕ ಇಷ್ಟಾರ್ಥ ಪೂರೈಸಲಿದೆ. ಆದರೆ ಗೆಳೆತನದಲ್ಲಿ ಮುನಿಸು ಮೂಡೀತು.
ಮಿಥುನ
ಸಂಬಂಧದಲ್ಲಿ ನಿಮ್ಮ ತಾಳ್ಮೆ ಪರೀಕ್ಷಿಸುವ ಬೆಳವಣಿಗೆ. ಕ್ಷುಲ್ಲಕ ವಿಷಯವೆಂದು ಕಡೆಗಣನೆ ಬೇಡ. ಸಂಘರ್ಷಕ್ಕೆ ಇಳಿಯಬೇಡಿ.
ಕಟಕ
ಕ್ಲಿಷ್ಟಕರ ಪರಿಸ್ಥಿತಿ ಉದ್ಭವಿಸಿದರೂ ಬಳಿಕ ಶಮನವಾಗಲಿದೆ. ಶ್ಲಾಘನೆ ಪಡೆಯುವಿರಿ. ಪ್ರೀತಿಯಲ್ಲಿ ಯಶಸ್ಸು. ಬಂಧುವೊಬ್ಬರು ಮುನಿಸಿಕೊಳ್ಳಬಹುದು.
ಸಿಂಹ
ಇತರರ ಜತೆ ವ್ಯವಹರಿಸುವಲ್ಲಿ ತೊಡಕು ಕಾಣಿಸಲಿದೆ. ಇದರಿಂದ ಮನಸ್ತಾಪ ಸಂಭವ. ಲಘು ಅನಾರೋಗ್ಯ ಕಾಡಬಹುದು.
ಕನ್ಯಾ
ದಿನವಿಡೀ ಕೆಲಸದ ಒತ್ತಡ. ಸಣ್ಣ ವಿಷಯಕ್ಕೂ ಹೆಚ್ಚು ಗಮನ ಕೊಡಿ. ಸಣ್ಣ ಲೋಪ ಗಂಭೀರ ಪರಿಣಾಮ ಬೀರೀತು. ಕೌಟುಂಬಿಕ ಒತ್ತಡ.
ತುಲಾ
ಸಂತೋಷದ ದಿನ. ಖಾಸಗಿ ಬದುಕಿನಲ್ಲಿ ಪ್ರೀತಿ, ಸಾಮರಸ್ಯ. ವೃತ್ತಿ ವ್ಯವಹಾರ ಸುಲಲಿತ. ಇಂದು ಸಾಲ ಕೊಟ್ಟ ಹಣ ಮರಳಿ ಸಿಗದು.
ವೃಶ್ಚಿಕ
ವೈಯಕ್ತಿಕ ವಿಚಾರದಲ್ಲಿ ಕೆಲವು ಚಿಂತೆ ಕಾಡುವುದು. ಬೆಂಬಲದ ಕೊರತೆ. ಅನ್ಯರ ಮೇಲಿನ ದ್ವೇಷ ಬಿಡಿ, ಸಹಕಾರಕ್ಕೆ ಮನ ಮಾಡಿ. ಧನವ್ಯಯ.
ಧನು
ನಿರಾಳ ಮನಸ್ಸು. ಹೊಸ ಯೋಜನೆಗೆ ಕೈಹಚ್ಚಲು ಕಾಲ ಸೂಕ್ತ. ಕೆಲಸದಲ್ಲಿ ಬಡ್ತಿ ಸಂಭವ. ಹಣದ ವಿಚಾರದಲ್ಲಿ ಪೂರಕ ಬೆಳವಣಿಗೆ.
ಮಕರ
ಯಾರದೋ ಜಗಳ ಸರಿಪಡಿಸಲು ಹೋಗಿ ನೀವು ಕಷ್ಟಕ್ಕೆ ಸಿಲುಕಬಹುದು. ಎಚ್ಚರ ಇರಲಿ. ಕೌಟುಂಬಿಕ ಸಹಕಾರ ಕಡಿಮೆ.
ಕುಂಭ
ಕೆಲಸ ಸುಗಮವಾಗಿ ಸಾಗದು. ಅಡ್ಡಿಗಳು, ಮಾನಸಿಕ ಒತ್ತಡ, ಅಸಹನೆ ಕಾಡುವುದು. ಹಣದ ವಿಷಯದಲ್ಲಿ ಪ್ರಮುಖ ನಿರ್ಧಾರ ತಾಳದಿರಿ.
ಮೀನ
ಖಾಸಗಿ ಬದುಕಲ್ಲಿ ಒತ್ತಡ ನಿವಾರಣೆ. ಯಾವುದೇ ಸಮಸ್ಯೆ ತಾತ್ಕಾಲಿಕ ಎಂಬುದು ಅರಿವಿರಲಿ. ಮುಖದಲ್ಲಿ ಸದಾ ನಗುವಿರಲಿ.



