November 19, 2026
Thursday, November 19, 2026
spot_img

ದಿನಭವಿಷ್ಯ: ಅನುಕೂಲಕರ ವಾತಾವರಣವಿದೆ, ಆರ್ಥಿಕ ತೊಂದರೆ ನಿವಾರಣೆಯಾಗಿ ನೆಮ್ಮದಿ ಸಿಗಲಿದೆ

ಮೇಷ
ವೃತ್ತಿಯಲ್ಲಿ ಹೆಚ್ಚು ಹೊಣೆ. ಯಾವುದೋ ಸಮಸ್ಯೆ ನಿಮ್ಮ ಏಕಾಗ್ರತೆ ಹಾಳು ಮಾಡಬಹುದು. ಆಪ್ತರೆನಿಸಿದವರೇ ಬೆನ್ನ ಹಿಂದೆ ಮಾತನಾಡುವರು.
ವೃಷಭ
ಉತ್ಸಾಹಹೀನತೆ. ಕೆಲಸದಲ್ಲಿ ನಿರಾಸಕ್ತಿ. ಹಣದ ಕೊರತೆ ಸಂಭವ. ಎಲ್ಲರ ಸಂತೋಷದಲ್ಲಿ ಭಾಗಿಯಾಗಿ. ದೂರವಾಗಿ ಉಳಿಯಬೇಡಿ.
ಮಿಥುನ
ಏಳುಬೀಳು ಎರಡನ್ನೂ ಇಂದು ಎದುರಿಸುವಿರಿ. ತಾಳ್ಮೆ ಅವಶ್ಯ. ದುಡುಕು ಬೇಡ. ಹಿತಮಿತ ಆಹಾರ ಸೇವನೆ ಸ್ವಾಸ್ಥ್ಯಕ್ಕೆ ಅಗತ್ಯ.
ಕಟಕ
ವೃತ್ತಿಯ ಜತೆಗೇ ಮನೆಯ ಒತ್ತಡವೂ ಹೆಚ್ಚಲಿದೆ. ಅದರ ಜತೆಗೇ ದೈಹಿಕ ಜಡತ್ವ. ಕಾರ್ಯ ವಿಳಂಬ ಸಾಧ್ಯತೆ. ವಿರಾಮ ಬಯಸುವಿರಿ.
ಸಿಂಹ
ಹಣದ ಸಮಸ್ಯೆ ಪರಿಹಾರ. ಆಪೇಕ್ಷಿತ ಪ್ರಗತಿ. ಮನೋಲ್ಲಾಸ. ಕೌಟುಂಬಿಕ ಪರಿಸರ ತೃಪ್ತಿಕರ. ಯಾವುದೇ ಕೊರತೆ ಬಾಧಿಸದು.
ಕನ್ಯಾ
ಹೆಚ್ಚುವರಿ ಕೆಲಸದ ಒತ್ತಡ. ಹಿರಿಯರಿಂದ ಅಹಿತಕರ ವರ್ತನೆ. ಅತಿ ಭಾವುಕರಾಗಿ ವರ್ತಿಸದಿರಿ. ಸಂಯಮ ಕಾಯ್ದುಕೊಳ್ಳಿ. ಆರೋಗ್ಯ ಏರುಪೇರು.
ತುಲಾ
ಕಾರ್ಯಗಳೆಲ್ಲ ಕ್ಷಿಪ್ರವಾಗಿ ಸಂಪೂರ್ಣ. ಇದರಿಂದ ಒತ್ತಡ ನಿವಾರಣೆ. ಆರ್ಥಿಕ ಪರಿಸ್ಥಿತಿ ಸ್ಥಿರ. ಏರುಪೇರು ಬಾಽಸಲಾರದು.
ವೃಶ್ಚಿಕ
ಹೆಚ್ಚು ಉತ್ಸಾಹ. ಯಾವುದೇ ಚಿಂತೆ ಬಾಧಿಸದು. ಸಂಗಾತಿ ಜತೆಗಿನ ವಿರಸ ಅಂತ್ಯ. ಆಪ್ತರ ಜತೆ ಕೂಡಿ ಕಳೆಯುವ ಅವಕಾಶ.
ಧನು
ಉತ್ಸಾಹದ ದಿನ. ಇತರರ ಮನ್ನಣೆ ಗಳಿಸುವ ಸಾಧನೆ ತೋರುವಿರಿ. ಉಳಿತಾಯ ಹೆಚ್ಚಳ. ಆರ್ಥಿಕ ಸಂಕಷ್ಟ ನಿವಾರಣೆ. ಬಂಧು ಭೇಟಿ.
ಮಕರ
ಇಂದು ಆರ್ಥಿಕ ಪರಿಸ್ಥಿತಿ ಸಾಧಾರಣ. ಖರ್ಚು ಹೆಚ್ಚಳದ ಚಿಂತೆ. ವೃತ್ತಿಯಲ್ಲಿ ಒತ್ತಡ. ಋತು ಸಂಬಂಧ ಅನಾರೋಗ್ಯ ಕಾಡಬಹುದು.
ಕುಂಭ
ಮನದಲ್ಲಿ ಅಶಾಂತಿ. ಅದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ಖರ್ಚು ಅಧಿಕ. ಕೆಲವರಿಗೆ ತೀವ್ರ ತಲೆನೋವು ತೋರೀತು.
ಮೀನ
ಎಲ್ಲವೂ ಸುಸೂತ್ರ ಆಗಿದ್ದರೂ ಏನೋ ಒತ್ತಡ ಬಾಽಸಲಿದೆ. ಸಂಬಂಧ ದಲ್ಲಿ ಭಿನ್ನಮತ. ಅನಿರೀಕ್ಷಿತ ಖರ್ಚು ಬರಲಿದೆ. ಬಂಧು ಭೇಟಿಯಿಂದ ನೆಮ್ಮದಿ.

Must Read

Skip to toolbar