November 8, 2026
Sunday, November 8, 2026
spot_img

ದಿನಭವಿಷ್ಯ: ಇಂದು ಭಾವನಾತ್ಮಕ ಪ್ರಸಂಗಗಳು ಎದುರಾಗಬಹುದು, ಆರ್ಥಿಕ ಸಮಾಧಾನ ಸಿಗಲಿದೆ

ಮೇಷ
ಭಾವನಾತ್ಮಕ ಪ್ರಸಂಗ. ಕೌಟುಂಬಿಕ ಸಂಭ್ರಮ. ಆರ್ಥಿಕ ಸಮಾಧಾನ. ಹಿಡಿದ ಗುರಿ ಸಾಧಿಸುವ ನಿಮ್ಮ ಛಲ ಈಡೇರಲಿದೆ.
ವೃಷಭ
ಮನೆಯಲ್ಲಿ ನಲಿವಿನ ಪರಿಸರ. ಬಂಧುಮಿತ್ರರ ಭೇಟಿ. ಕೆಟ್ಟ ದೆಸೆ ಪರಿಹಾರ. ಆಪ್ತ ಸಂಬಂಧ ಹೊಸ ಆಯಾಮ ಪಡೆದೀತು. ಖರ್ಚು ಅಧಿಕ.
ಮಿಥುನ
ಸಂತೋಷ ಹಂಚಿಕೊಳ್ಳಲು ಇತರರ ಸಂಗ ಬಯಸುವಿರಿ. ಬಂಧುತ್ವದ ಬಿಕ್ಕಟ್ಟು ಪರಿಹಾರ. ಕೌಟುಂಬಿಕ ಸಾಮರಸ್ಯ. ವೆಚ್ಚ ಹೆಚ್ಚಲಿದೆ.
ಕಟಕ
ಒತ್ತಡ ತರುವ ವಿಷಯಗಳು ಇತ್ಯರ್ಥ. ವಾಹನ ಖರೀದಿ ಗೋಚರವಿದೆ. ಮೀನಮೇಷ ಬೇಡ. ವಿವಾಹ ಬಂಧ ಸಾಧ್ಯ.
ಸಿಂಹ
ನಿಮ್ಮ ಸುತ್ತ ಇಂದು ಪ್ರಶಾಂತ ವಾತಾವರಣ. ಒತ್ತಡವಿಲ್ಲದ ದಿನ. ಹೊಟ್ಟೆ ಕೆಡುವ ತಿನಿಸು ದೂರವಿಡಿ. ವಾಹನ, ಮನೆ ಖರೀದಿಗೆ ಕಾಲ ಸೂಕ್ತವಾಗಿದೆ.
ಕನ್ಯಾ
ನೌಕರಿಗೆ ಸಂಬಂಽಸಿ ಶುಭ ಸುದ್ದಿ. ಆರ್ಥಿಕ ಉತ್ತೇಜನ. ಬಂಧು ಜತೆಗಿನ ವಿರಸ ಶಮನ. ಸಂಗಾತಿಯ ಬೆಂಬಲ ದೊರಕಲಿದೆ.
ತುಲಾ
ವ್ಯವಹಾರದಲ್ಲಿ ಉನ್ನತಿ. ಧನಾಗಮ. ವಂಚನೆಗೆ ಗುರಿಯಾಗುವ ಸಾಧ್ಯತೆ. ತುಸು ಎಚ್ಚರ ವಹಿಸಿ. ಬಂಧುಗಳ ಜತೆ ಹರ್ಷ ವಿನಿಮಯ.
ವೃಶ್ಚಿಕ
ಆಪ್ತ ಬಂಧುಗಳ ಜತೆ ಆತ್ಮೀಯವಾಗಿ ಕಳೆಯುವ ಅವಕಾಶ. ಹರ್ಷಾಚರಣೆ. ರೇಗದೆ ವಿನಯ ಕಾಯ್ದುಕೊಳ್ಳಿ. ಯಾರದೇ ಮನ ನೋಯಿಸದಿರಿ.
ಧನು
ಉಲ್ಲಾಸದ ಮನಸ್ಥಿತಿ. ಮನೆಯವರ ಸಹಕಾರ. ಏಕಾಂಗಿಗಳಿಗೆ ಸಂಗಾತಿ ಲಭ್ಯ. ಹೊಸ ವ್ಯವಹಾರದಲ್ಲಿ ಹಣ ಹೂಡಿದರೆ ಲಾಭ.
ಮಕರ
ಐಷಾರಾಮಿ ವಸ್ತು ಖರೀದಿಸುವ ಯೋಗವಿದೆ. ಅದನ್ನು ಸದುಪಯೋಗ ಮಾಡಿ. ಬಂಧುಗಳ ಜತೆ ವಿರಸ ಅಂತ್ಯ. ವೆಚ್ಚ ನಿಯಂತ್ರಣ.
ಕುಂಭ
ದೃಢ ಮನಸ್ಸು, ಆತ್ಮವಿಶ್ವಾಸದ ನಡೆ ನಿಮ್ಮನ್ನು ಪ್ರಗತಿಗೆ ಕೊಂಡೊಯ್ಯಬಲ್ಲುದು. ಅಹಂಕಾರದ ಪ್ರದರ್ಶನ ಪ್ರತಿಕೂಲವಾದೀತು.
ಮೀನ
ಕಠಿಣ ಶ್ರಮ ಇಂದು ಅಗತ್ಯ. ನಿಮ್ಮ ನಿರ್ಲಕ್ಷ್ಯ ಟೀಕೆಗೆ ಗುರಿಯಾದೀತು. ಆಪ್ತ ಬಂಧುವಿನ ಜತೆ ಸಂಬಂಧ ಸುಧಾರಣೆ. ಧನಾಗಮ.

Must Read

Skip to toolbar