ಜಾಗತಿಕ ಹೂಡಿಕೆದಾರರಿಂದ ಡೈಲಿಹಂಟ್‌ ಮಾತೃಸಂಸ್ಥೆಯಲ್ಲಿ ಬೃಹತ್‌ ಪ್ರಮಾಣದ ಹೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆನ್‌ಲೈನ್ ಸುದ್ದಿ ಸಂಗ್ರಾಹಕ ಮಾಧ್ಯಮವಾದ ಡೈಲಿಹಂಟ್ ಹಾಗೂ ಕಿರು ವಿಡಿಯೋಗಳ ಪ್ಲಾಟ್‌ಫಾರ್ಮ್ ಜೋಶ್‌ನ ಮಾತೃ ಸಂಸ್ಥೆಯಾದ ಭಾರತದ ವರ್ಸೆ ಇನ್ನೋವೇಶನ್ ಸಂಸ್ಥೆಗೆ ಜಾಗತಿಕ ಹೂಡಿಕೆದಾರರಿಂದ 805ಮಿಲಿಯನ್‌ ಡಾಲರ್‌ಹೂಡಿಕೆ ಹರಿದುಬಂದಿದೆ. ಇದರಿಂದಾಗಿ ಕಂಪನಿಯ ಒಟ್ಟು ಮೌಲ್ಯ 5 ಬಿಲಿಯನ್‌ ಡಾಲರ್‌ ಗಳಿಗೆ ಏರಿಕೆಯಾಗಿದೆ.
ಕೆನಡಾದ ಪಿಂಚಣಿ ಯೋಜನೆ ಹೂಡಿಕೆ ಮಂಡಳಿ (ಸಿಪಿಪಿಐಬಿ) ನೇತೃತ್ವದಲ್ಲಿ ನಡೆದ ಬಂಡವಾಳ ಸಂಗ್ರಹ ಸಮಾವೇಶದಲ್ಲಿ ಸಂಸ್ಥೆಗೆ ದೊಡ್ಡಮಟ್ಟದ ಬಂಡವಾಳ ಹರಿದುಬಂದಿದೆ.
ಒಂಟಾರಿಯೊ ಟೀಚರ್ಸ್‌ ಪೆನ್ಷನ್‌ ಪಂಡ್ , ಲಕ್ಸರ್ ಕ್ಯಾಪಿಟಲ್ ಮತ್ತು ಸುಮೇರು ವೆಂಚರ್ಸ್‌ನಂತಹ ಜಾಗತಿಕ ಹೂಡಿಕೆದಾರರು ಹಾಗೂ ಸೋಫಿನಾ ಗ್ರೂಪ್, ಬೈಲಿ ಗಿಫೋರ್ಡ್ ಮತ್ತಿತರ ಮುಂಚೂಣಿ ಸಂಸ್ಥೆಗಳು ಹೂಡಿಕೆಗೆ ಸಹಿ ಮಾಡಿವೆ.
ಖಾಸಗಿ ಮತ್ತು ಸಾರ್ವಜನಿಕ ಉದ್ಯಮಗಳು ಬಂಡವಾಳವನ್ನು ಸಂಗ್ರಹಿಸಲು ಕಷ್ಟಪಡುತ್ತಿರುವ ಇಂತಹ ಸಂಕಷ್ಟದ ಸಂದರ್ಭದಲ್ಲಿ ನನ್ನ ಸಂಸ್ಥೆಗೆ ದೊಡ್ಡ ಮಟ್ಟದ ಬಂಡವಾಳ ಸಿಕ್ಕಿದೆ. ಇದು ಭಾರತದಲ್ಲಿನ ಯಾವುದೇ ಸ್ಟಾರ್ಟ್‌ಅಪ್‌ ಗೆ ಒಂದೇ ಬಾರಿಗೆ ಹರಿದುಬಂದಿರುವ ಅತಿದೊಡ್ಡ ಹೂಡಿಕೆಯಾಗಿದೆ. ಇದು ನಮ್ಮ ಜವಾಬ್ದಾರಿಗಳನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವರ್ಸೆ ಇನ್ನೋವೇಶನ್‌ನ ಸಹ-ಸಂಸ್ಥಾಪಕ ಉಮಂಗ್ ಬೇಡಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!