Monday, March 27, 2023

Latest Posts

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರದ ಗಡಿ ದಾಟಿದ ಕೊರೋನಾ ಪಾಸಿಟಿವ್

ಹೊಸ ದಿಗಂತ ವರದಿ, ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪತ್ತೆ ಸಂಖ್ಯೆ ಮಂಗಳವಾರ ಸಾವಿರದ ಗಡಿ ದಾಟಿದೆ.
ಡಿಸೆಂಬರ್‌ನಲ್ಲಿ ಒಂದಂಕಿಯಿಂದ 15-20ರ ಆಸುಪಾಸಿನಲ್ಲಿದ್ದ ಕೊರೋನಾ ಸೋಂಕಿತರ ಪತ್ತೆ ಸಂಖ್ಯೆ ಬಳಿಕ ಏರುಮುಖವಾಗಿಯೇ ಸಾಗಿ ಇದೀಗ ಒಂದು ಸಾವಿರ ತಲುಪಿದೆ. ಮಂಗಳವಾರ ಜಿಲ್ಲೆಯಲ್ಲಿ 1058 ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. 275 ಮಂದಿ ಗುಣಮುಖರಾಗಿದ್ದಾರೆ. ಮಂಗಳವಾರ ಜಿಲ್ಲೆಯಲ್ಲಿ ಕೊರೋನಾದಿಂದ ಯಾವುದೇ ಸಾವು ಸಂಭವಿಸಿಲ್ಲ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 10.76 ದಾಖಲಾಗಿದೆ.
ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 123305ಕ್ಕೆ ಏರಿಕೆಯಾಗಿದೆ. ಈ ಪೈಕಿ 4964 ಸಕ್ರಿಯ ಪ್ರಕರಣಗಳು. 116630 ಮಂದಿ ಗುಣಮುಖರಾಗಿದ್ದಾರೆ. 1711 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಮಂಗಳವಾರ ಐದು ಕ್ಲಸ್ಟರ್ ಪ್ರಕರಣ ಗುರುತಿಸಲಾಗಿದೆ. ಮಂಗಳೂರು ತಾಲೂಕಿನ ಬಜ್ಪೆ ಖಾಸಗಿ ಶಾಲೆಯಲ್ಲಿ 81 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು,8 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗ್ರೆ ಸರಕಾರಿ ಶಾಲೆಯಲ್ಲಿ 45 ಮಂದಿಯ ಪೈಕಿ 7 ಮಕ್ಕಳಿಗೆ ಕೊರೋನಾ ದೃಢವಾಗಿದೆ. ಬೋಂದೆಲ್ ವೃದ್ಧಾಶ್ರಮದಲ್ಲಿ 52 ಜನರ ಪೈಕಿ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಖಾಸಗಿ ಆಯುರ್ವೇದ ಹಾಸ್ಟೆಲ್‌ನಲ್ಲಿ 95 ಮಂದಿಯ ಪೈಕಿ 20 ಜನರಲ್ಲಿ ಕೊರೋನಾ ಪತ್ತೆಯಾಗಿದೆ. ಬಂಟ್ವಾಳ ತಾಲೂಕಿನ ಮಹಿಳಾ ಹಾಸ್ಟೆಲ್‌ನ 74 ಮಂದಿಯನ್ನು ಪರೀಕ್ಷೆ ನಡೆಸಲಾಗಿದ್ದು, 8 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!