ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 25ನೇ ವರ್ಷದ ಅವರೆಬೇಳೆ ಮೇಳಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಂದು ಚಾಲನೆ ನೀಡಿದರು.
ಮೇಳವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಡಿಸಿಎಂ, ಅವರೆಬೇಳೆಯಿಂದ ತಯಾರಿಸಿದ ದೋಸೆ ಸವಿದರು. ಎರಡು ಸೇರು ಅವರೆಬೇಳೆ, ಅವರೆಬೇಳೆ ಅವಲಕ್ಕಿ, ಮಿಕ್ಷ್ಚರ್, ಅವರೆಬೇಳೆ ಖಾರ, ನಿಪ್ಪಟ್ಟು ಎಲ್ಲವನ್ನೂ ಖರದಿಸಿದರು.
ಅವರೆ ಬೇಳೆ ದೋಸೆ ಸವಿದು, ತುಂಬಾ ಚೆನ್ನಾಗಿ ಇತ್ತು. ಅವರೆಬೇಳೆ ದೋಸೆ ಮಾಡಲು ನನ್ನ ಪತ್ನಿಗೆ ಹೇಳುತ್ತೇನೆ. ಅವರೆಬೇಳೆ ರುಚಿ ಬಲ್ಲವನೇ ಬಲ್ಲ ಎಂದು ನುಡಿದರು.