ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿಯ ನಜಾಫ್‌ಗಢದ ಡಾಬಾವೊಂದರ ಫ್ರಿಡ್ಜ್‌ನಲ್ಲಿ ಶವ ಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಹತಳಾದ ನಿಕ್ಕಿ ಯಾದವ್ ಹಾಗೂ ಸಾಹಿಲ್ ಗೆಹ್ಲೋಟ್ ಅವರು 2020ರಲ್ಲಿಯೇ ಮದುವೆಯಾಗಿದ್ದರು. ಆದರೆ, ಎರಡನೇ ಮದುವೆಯಾಗುವ ಕಾರಣಕ್ಕಾಗಿ ಸಾಹಿಲ್ ಗೆಹ್ಲೋಟ್, ನಿಕ್ಕಿ ಯಾದವ್‌ಳನ್ನು ಕೊಲೆ ಮಾಡಿ, ಆಕೆಯ ಶವವನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಎಂದು ಪೊಲೀಸರಿಂದ ತಿಳಿದುಬಂದಿದೆ.
ನಿಕ್ಕಿ ಯಾದವ್ ಹಾಗೂ ಸಾಹಿಲ್ ಗೆಹ್ಲೋಟ್ ಅವರು ಮದುವೆಯಾದ ಪ್ರಮಾಣಪತ್ರ ಪೊಲೀಸರಿಗೆ ದೊರೆತಿದೆ. ಇಬ್ಬರೂ 2020ರಲ್ಲಿಯೇ ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ಆರ್ಯ ಸಮಾಜ ದೇವಾಲಯದಲ್ಲಿ ಮದುವೆಯಾಗಿದ್ದಾರೆ. ಈ ಫೋಟೊ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಆದರೆ, ನಿಕ್ಕಿ ಯಾದವ್ ಜತೆ ಮದುವೆಯಾಗಿದ್ದು ಸಾಹಿಲ್ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ ಎಂದು ತಿಳಿದುಬಂದಿದೆ.
ಸಾಹಿಲ್ ಗೆಹ್ಲೋಟ್‌ಗೆ ಕುಟುಂಬಸ್ಥರ ಕಡೆಯಿಂದ ಒತ್ತಡದಿಂದ ಆತ ಎರಡನೇ ಮದುವೆಗೆ ಒಪ್ಪಿಗೆ ಸೂಚಿಸಿದ್ದ. ಇದಕ್ಕಾಗಿಯೇ ನಿಕ್ಕಿ ಯಾದವ್‌ಳನ್ನು ಕೊಂದು, ಆಕೆಯ ಶವವನ್ನು ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದ ಎಂದು ತಿಳಿದುಬಂದಿದೆ.