ಸಹಸ್ರ ಬಿಲ್ವಪತ್ರೆಯೊಂದಿಗೆ ರಾಘವ ಚೈತನ್ಯ ದೇವಸ್ಥಾನದ ಶಿವಲಿಂಗಕ್ಕೆ ಪೂಜೆ

ಹೊಸ ದಿಗಂತ ವರದಿ, ಕಲಬುರಗಿ:

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ರಾಘವ ಚೈತನ್ಯ ದೇವಸ್ಥಾನದಲ್ಲಿನ ಶಿವಲಿಂಗಕ್ಕೆ ಇಲ್ಲಿಯ ವಕ್ಫ್ ಟ್ರಿಬೂನಲ್ ನ್ಯಾಯಾಲಯದ ಆದೇಶದಂತೆ ಶನಿವಾರ ಶ್ರೀ ರಾಮ ಸೇನೆಯ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ,ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯರು ಹಾಗೂ ಚೌಡಾಪುರಿನ ಮುರಾರಿ ಮಹಾರಾಜರ ಸೇರಿದಂತೆ 15 ಹಿಂದೂಗಳ ಸಮ್ಮುಖದಲ್ಲಿ ದಗಾ೯ದಲ್ಲಿನ ರಾಘವ್ ಚೈತನ್ಯ ದೇವಸ್ಥಾನದ ಶಿವಲಿಂಗಕ್ಕೆ ಸಹಸ್ರ ಬಿಲ್ವಾಚ೯ನೆ,ಗಂಗಾ ಪೂಜೆ,ಗಣಪತಿ ಪೂಜೆ, ರುದ್ರಾಭಿಷೇಕ ಹಾಗೂ ಮಹಾ ಮಂಗಳಾರತಿ ಯೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಶ್ರೀ ಸಿದ್ದಲಿಂಗ ಸ್ವಾಮೀಜಿ,ಶ್ರೀ ವೀರಭದ್ರ ಶಿವಾಚಾರ್ಯರು,ಶ್ರೀ ಮುರಾರಿ ಮಹಾರಾಜರು, ಶಾಸಕ ಸುಭಾಷ ಗುತ್ತೇದಾರ್,ಬಸವರಾಜ ಮತ್ತಿಮಡು, ಮಾಲೀಕಯ್ಯಾ ಗುತ್ತೇದಾರ್,ಚಂದು ಪಾಟೀಲ್,ಸಿದ್ಧಾಜಿ ಪಾಟೀಲ್, ಪ್ರಕಾಶ್ ಜೋಶಿ,ಅರುಣ್ ಭಿನಾಡೆ, ಮಹೇಶ್ ಗೊಬ್ಬುರ್, ನಾಗನಾಥ ಎಟೆ, ಆನಂದ ಪಾಟೀಲ, ಮಹೇಶ್ ಗೌಳಿ ದೇವಸ್ಥಾನದೊಳಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಹಜರತ್ ಲಾಡ್ಲೆ ಮಶಾಖ್ ದರ್ಗಾ ಮ್ಯಾನೇಜಿಂಗ್ ಕಮಿಟಿಯ ಅಧ್ಯಕ್ಷ ಮೊಯಿಝ್ ಅನ್ಸಾರಿ ಕಾರಬಾರಿ, ಆಸೀಫ್ ಅನ್ಸಾರಿ ಕಾರಬಾರಿ, ನೂರೂದ್ದೀನ್ ನಿಯಾಝುದ್ದೀನ್ ಅನ್ಸಾರಿ , ರಿಝ್ವಾನ್ ವಾಹಾಬ್ ಅನ್ಸಾರಿ, ಮೊಹಮ್ಮದ ಸಾದತ್ ಅನ್ಸಾರಿ, ಫರ್ವೆಜ್ ಅನ್ಸಾರಿ, ಸಬೀರ ಅನ್ಸಾರಿ, ಐದ್ರೀಸ್ ಅನ್ಸಾರಿ, ಮುಸಾ ಅನ್ಸಾರಿ, ಸಾದೀಖ್ ಅನ್ಸಾರಿ, ಶಖೀಲ್ ಫರಾಶ್, ಗನಿ ಫರಾಶ್, ಮಿನಾಜ್ ಫರಾಶ್, ಐದ್ರೀಶ್ ಅನ್ಸಾರಿ ಇವರೇ ಸಂದಲ್ ನೆರವೇರಿಸಿದರು.

ಹೊರವಲಯದಲ್ಲಿ ಪೂಜೆ:
ದರ್ಗಾದಲ್ಲಿ 15 ಜನರಿಗೆ ಮಾತ್ರ ದರ್ಗಾ ದಲ್ಲಿನ ಶಿವಲಿಂಗ ಪೂಜೆಗೂ ಅವಕಾಶ ನೀಡಿದ್ದರಿಂದ ಜತೆಗೆ ಆಳಂದ ಪಟ್ಟಣದಲ್ಲಿ 144 ಕಲಂ ಜಾರಿ ಮಾಡಿದ್ದರಿಂದ ಆಳಂದ ಪಟ್ಟಣದ ಹೊರವಲಯ ಪ್ರಗತಿ ಮೈದಾನದಲ್ಲಿ ಹಿಂದೂ ಮುಖಂಡರು ಹಲವು ಪೂಜೆಗಳನ್ನು ನೆರವೇರಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!