ಹೊಸದಿಗಂತ ವರದಿ, ವಿಜಯಪುರ:
ಕರ್ತವ್ಯ ನಿರತ ಸಬ್ ಇನ್ಸಪೆಕ್ಟರ್ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಶಂಕರಗೌಡ ಸಾರವಾಡ (28) ಮೃತ ಪಿಎಸ್ಐ.
ಶಂಕರಗೌಡ ಸಾರವಾಡ ಇವರು, ವೈರ್ ಲೆಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ, ನರ ರೋಗದಿಂದ ಪಿಎಸ್‌ಐ ಶಂಕರಗೌಡ ಬಳಲುತ್ತಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಪಿಎಸ್ಐ ಸಾವಿಗೆ ಎಸ್ಪಿ ಋಷಿಕೇಷ ಸೋನವಾಣೆ ಹಾಗೂ ಹಿರಿಯ ಅಧಿಕಾರಿ, ಸಿಬ್ಬಂದಿಗಳು ಕಂಬನಿ ವ್ಯಕ್ತಪಡಿಸಿದ್ದಾರೆ.