ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಗುಡ್ಡಗಾಡು ಪ್ರವಾಸಿ ಸ್ಥಳ ಮುರ್ರೆಯಲ್ಲಿ ವಿಪರೀತ ಹಿಮಪಾತವಾಗಿದ್ದು, ಪ್ರವಾಸಕ್ಕೆ ಬಂದ 16 ಮಂದಿ ಮೃತಪಟ್ಟಿದ್ದಾರೆ.
ಹಿಮಪಾತದಿಂದಾಗಿ ಪ್ರವಾಸಿಗರ ವಾಹನಗಳೆಲ್ಲ ಹಿಮದಡಿ ಸಿಲುಕಿದ್ದು, ವಾಹನದೊಳಗಿದ್ದ 16 ಮಂದಿ ಮೃತಪಟ್ಟಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಹಿಮಪಾತದಿಂದ ಮುರ್ರೆಯಿಂದ ಹೊರಹೋಗುವ ಎಲ್ಲ ರಸ್ತೆ ಬ್ಲಾಕ್ ಆಗಿದ್ದು, ನಗರದಲ್ಲಿ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದಾರೆ. ಸಾವಿರಕ್ಕೂ ಹೆಚ್ಚು ವಾಹನಗಳು ಹಿಮದಡಿ ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಸಿಲುಕಿರುವ ಜನರಿಗೆ ಸ್ಥಳೀಯರು ಆಹಾರ, ಕಂಬಳಿ ನೀಡಿ ಸಹಕರಿಸಿದ್ದಾರೆ.
ಈ ಮಧ್ಯೆ ಕಾರಿನಲ್ಲಿ ಸಿಲುಕಿದ್ದ ಜನ ಚಳಿಗೆ ಮೃತಪಟ್ಟಿಲ್ಲ. ಚಳಿಗೆ ಹೆದರಿ ಕಾರಿನ ಹೀಟರ್ ಆನ್ ಮಾಡಿದ್ದಾರೆ. ಬಿಸಿ ಗಾಳಿಯಿಂದ, ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.