ದೀಪಿಕಾ ಬೋಲ್ಡ್ ಪಾತ್ರಗಳಲ್ಲಿ ಕಾಣಿಸೋಕೆ ಈ ವ್ಯಕ್ತಿ ಕಾರಣವಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ದೀಪಿಕಾ ಪಡುಕೋಣ್ ಅಭಿನಯದ ಗೆಹ್ರಾಯಿಯಾ ನಾಳೆ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗಲಿದೆ.
ಗೆಹ್ರಾಯಿಯಾದಲ್ಲಿ ದೀಪಿಕಾ ಸಿಕ್ಕಾಪಟ್ಟೆ ಬೋಲ್ಡ್ ಅವತರಾದಲ್ಲಿ ಕಾಣಿಸಿದ್ದಾರೆ.
ಸಿನಿಮಾದಲ್ಲಿ ಕಿಸ್ಸಿಂಗ್ಸ್ ಸೀನ್ಸ್ ಕೂಡ ಹೆಚ್ಚೇ ಇದ್ದಂತೆ ಟ್ರೇಲರ್‌ನಲ್ಲಿ ಕಾಣಿಸುತ್ತಿದೆ. ಮದುವೆ ನಂತರ ಹೆಚ್ಚು ಬೋಲ್ಡ್ ಪಾತ್ರಕ್ಕೆ ಕೈ ಹಾಕಬಾರದು ಎಂದುಕೊಂಡಿದ್ದ ದೀಪಿಕಾ ತಮ್ಮ ನಿರ್ಧಾರ ಬದಲಾಯಿಸಿದ್ದಾರೆ.
ಈ ರೀತಿ ಪಾತ್ರಗಳನ್ನು ಹೇಗೆ ಒಪ್ಪುತ್ತಾರೆ? ಇದಕ್ಕೆ ಯಾರು ಬೆಂಬಲ ನೀಡ್ತಾರೆ ಎನ್ನುವ ಬಗ್ಗೆ ದೀಪಿಕಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Ranveer bhai, kya ho raha hai? Netizens on Deepika, Siddhant's HOT  chemistry in 'Gehraiyaan' | Movies News | Zee Newsಮೊದಲು ಕಥೆ ಕೇಳಿದಾಗ ದೀಪಿಕಾ ತಕ್ಷಣ ಒಪ್ಪಿಗೆ ನೀಡೋದಿಲ್ಲ. ಆಲೋಚನೆ ಮಾಡೋದಕ್ಕೆ ಎರಡು ದಿನ ಸಮಯ ಕೇಳುತ್ತಾರೆ. ಮನೆಗೆ ಬಂದು ಸುಮ್ಮನೆ ಕುಳಿತು ಪಾತ್ರದ ಬಗ್ಗೆ ಆಲೋಚನೆ ಮಾಡುತ್ತಾರಂತೆ. ಆಗಲೂ ಸರಿಯಾಗಿ ಉತ್ತರ ಸಿಗದಿದ್ದಾಗ ರಣ್‌ವೀರ್ ಜೊತೆ ಡಿಸ್ಕಸ್ ಮಾಡುತ್ತಾರಂತೆ.

Ranveer Singh On Deepika Padukone: "I Would Have Been Lost" Without Herಬೋಲ್ಡ್ ಪಾತ್ರ ಆದರೇನು ಪಾತ್ರ ಚೆನ್ನಾಗಿದ್ದರೆ ಒಪ್ಪೋದಕ್ಕೆ ರಣ್‌ವೀರ್ ಬೆಂಬಲ ನೀಡುತ್ತಾರೆ. ತನ್ನ ತಲೆಯಲ್ಲಿ ಓಡುತ್ತಿರೋ ಆಲೋಚನೆಗಳನ್ನು ಪದಗಳಲ್ಲಿ ಇಳಿಸೋದು ನನಗೆ ಕಷ್ಟ. ಆದರೆ ರಣ್‌ವೀರ್ ಅದನ್ನು ಮಾಡಿಬಿಡುತ್ತಾರೆ. ಬೋಲ್ಡ್ ಪಾತ್ರ ಆರಿಸೋದಕ್ಕೆ ನನಗೆ ರಣ್‌ವೀರ್ ಸಂಪೂರ್ಣ ಬೆಂಬಲ ಇದೆ ಎಂದು ದೀಪಿಕಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!