ಬರೋಬ್ಬರಿ 99 ಕೋಟಿ ರೂ.- ಇದು ʼಬಚ್ಚನ್‌ ಪಾಂಡೆʼ ಚಿತ್ರಕ್ಕೆ ನಟ ಅಕ್ಷಯ್‌ ಪಡೆದಿರೋ ಸಂಭಾವನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟ ಅಕ್ಷಯ್‌ ಕುಮಾರ್‌ ನಟಿಸುವ ಚಿತ್ರ ಬಚ್ಚನ್‌ ಪಾಂಡೆ ಇದೇ ಮಾರ್ಚ್‌ 18ಕ್ಕೆ ರಿಲೀಸ್‌ ಆಗಿದ್ದು, ಬಾಕ್ಸ್‌ ಆಫೀಸ್‌ ಧೂಳೆಬ್ಬಿಸಲು ಸಜ್ಜಾಗುತ್ತಿದೆ.
ಇನ್ನು ಬಚ್ಚನ್‌ ಪಾಂಡೆ ರಿಲೀಸ್‌ ಆದ ಒಂದು ವಾರಕ್ಕೆ ರಾಜಮೌಳಿ ನಿರ್ದೇಶನದ ಆರ್‌ ಆರ್‌ ಆರ್‌ ಚಿತ್ರ ಕೂಡ ರಿಲೀಸ್‌ ಆಗಲಿದ್ದು, ಯಾವುದು ಸಿನಿರಂಗದಲ್ಲಿ ಹೆಚ್ಚು ಸದ್ದು ಮಾಡುತ್ತದೆ ಎಂದು ಕಾದು ನೋಡಬೇಕಿದೆ.
ಚಿತ್ರದ ರಿಲೀಸ್‌ ಗೂ ಮುನ್ನವೇ ನಟ ಅಕ್ಷಯ್‌ ಕುಮಾರ್‌ ಅವರ ಸಂಭಾವನೆ ಕೇಳಿ ಸಿನಿ ಪ್ರಿಯರು ಶಾಕ್‌ ಆಗಿದ್ದಾರೆ. ಹೌದು ಬಚ್ಚನ್‌ ಪಾಂಡೆ ಚಿತ್ರಕ್ಕೆ ಅಕ್ಷಯ್‌ ಬರೋಬ್ಬರಿ 99 ಕೋಟಿ ರೂ. ಪಡೆದಿದ್ದಾರಂತೆ.
ಮತ್ತೊಂದು ಶಾಕಿಂಗ್‌ ಅಂದರೆ ಈ ಸಂಭಾವನೆ ನಟ ಅಕ್ಷಯ್‌ ಹಾಗೂ ನಿರ್ಮಾಪಕ ಸಾಜಿದ್‌ ನಾಡಿಯದ್ವಾಲ ಜತೆ ಮಾತುಕತೆ ನಡೆಸಿ ನಂತರ ಡಿಸ್ಕೌಂಟ್‌ ನಲ್ಲಿ ಫೈನಲ್‌ ಆದ ಸಂಭಾವನೆ ಇದು ಎನ್ನಲಾಗುತ್ತಿದೆ.
ಈ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅಕ್ಷಯ್‌ ಕುಮಾರ್‌ ಕೂಡ ಒಬ್ಬರು.
ಇನ್ನು ಈ ಚಿತ್ರಕ್ಕೆ ಒಟಿಟಿಯಿಂದ 175 ಕೋಟಿ ರೂ. ನ ಆಫರ್‌ ಬಂದಿತ್ತು. ಆದರೆ ಇದನ್ನು ನಿರ್ಮಾಪಕ ಸಾಜಿತ್‌ ತಿರಸ್ಕರಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!