Thursday, March 23, 2023

Latest Posts

ಕತಾರ್ ಏರ್‌ವೇಸ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕತಾರ್ ಏರ್‌ವೇಸ್‌ ವಿಶ್ವದ ಅತ್ಯಂತ ದುಬಾರಿ ಮತ್ತು ಐಷಾರಾಮಿ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ. ಕತಾರ್ ಏರ್‌ವೇಸ್ ಇತ್ತೀಚೆಗೆ ಏರ್ ಟ್ರಾನ್ಸ್‌ಪೋರ್ಟ್ ರೇಟಿಂಗ್ ಸಂಸ್ಥೆ ಸ್ಕೈಟ್ರಾಕ್ಸ್‌ನಿಂದ ವರ್ಲ್ಡ್ ಏರ್‌ಲೈನ್ ಅವಾರ್ಡ್ಸ್‌ನಲ್ಲಿ 2022 ರ ವರ್ಷದ ಏರ್‌ಲೈನ್ ಪ್ರಶಸ್ತಿಯನ್ನು ಗೆದ್ದಿದೆ. ಕತಾರ್ ಏರ್‌ವೇಸ್‌ ಏಳನೇ ಬಾರಿ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಕತಾರ್ ಏರ್‌ವೇಸ್‌ ಪ್ರಸ್ತುತ ತನ್ನ ವಿಮಾನ ನಿಲ್ದಾಣಗಳಿಂದ ಸುಮಾರು 150 ದೇಶಗಳಿಗೆ ವಿಮಾನಗಳನ್ನು ನಿರ್ವಹಿಸುತ್ತಿದೆ. ಇತ್ತೀಚೆಗೆ ಕತಾರ್ ಏರ್‌ವೇಸ್ ತನ್ನ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ ಅವರನ್ನು ನೇಮಿಸಿಕೊಂಡಿದೆ. ಈ ಸಂದರ್ಭದಲ್ಲಿ ಕತಾರ್ ಏರ್ವೇಸ್ ದೀಪಿಕಾ ಪಡುಕೋಣೆ ಜೊತೆಗಿನ ಜಾಹೀರಾತನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅವರು ತಮ್ಮ ವಿಮಾನ ನಿಲ್ದಾಣಗಳು ಮತ್ತು ವಿಮಾನಗಳು, ಎಷ್ಟು ಆರಾಮದಾಯಕ ಮತ್ತು ಐಷಾರಾಮಿ ಎಂಬುದನ್ನು ತೋರಿಸಿದರು. ನಮ್ಮ ಹೊಸ ಜಾಗತಿಕ ಬ್ರ್ಯಾಂಡ್ ರಾಯಭಾರಿ ದೀಪಿಕಾ ಪಡುಕೋಣೆ ಅವರನ್ನು ಪರಿಚಯಿಸಲಾಗುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ.

ಇದರೊಂದಿಗೆ ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿರುವ ಕತಾರ್ ಏರ್‌ವೇಸ್‌ನ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿರುವ ದೀಪಿಕಾ ಅವರನ್ನು ಹಲವು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಅಭಿನಂದಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!