ರಿಲೀಸ್‌ ಆದ ಒಂದೇ ದಿನಕ್ಕೆ ಲೀಕ್ ಆಯ್ತು ಎರಡು ಬಹುನಿರೀಕ್ಷಿತ ಚಿತ್ರಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚೆಗೆ ಎಲ್ಲೆಡೆ ಪೈರಸಿ ತಲೆ ನೋವು ಶುರುವಾಗಿದೆ. ಚಿತ್ರ ರಿಲೀಸ್‌ ಆದ ಒಂದೇ ದಿನಕ್ಕೆ ಚಿತ್ರಗಳು ಲೀಕ್‌ ಆಗುತ್ತಿದ್ದು, ಚಿತ್ರತಂಡದಲ್ಲಿ ಆತಂಕ ಮೂಡಿಸಿದೆ.
ಶುಕ್ರವಾರ ತೆರೆಕಂಡ ನಟ ರವಿ ತೇಜ ನಟನೆಯ ಖಿಲಾಡಿ ಚಿತ್ರ ಹಾಗೂ ನಟಿ ದೀಪಿಕಾ ಪಡುಕೋಣ್‌ ನಟನೆಯ ಗೆಹರಾಯಿಯಾ ಚಿತ್ರಗಳು ಈಗ ಪೈರಸಿ ಸಮಸ್ಯೆ ಅನುಭವಿಸುತ್ತಿದೆ.
ಖಿಲಾಡಿ ಚಿತ್ರ ಈಗಾಗಲೇ ತಮಿಳು ರಾಕರ್ಸ್‌, ಟೆಲಿಗ್ರಾಮ್‌ ಸೇರಿ ಹಲವು ಕಡೆಗಳಲ್ಲಿ ಚಿತ್ರ ಲೀಕ್‌ ಆಗಿದ್ದು, ಚಿತ್ರತಂಡಕ್ಕೆ ಕಲೆಕ್ಷನ್‌ ಮೇಲೆ ಹೊಡೆತ ಬೀಳುವ ಆತಂಕ ಎದುರಾಗಿದೆ.
ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ ನಟನೆಯ ಗೆಹರಾಯಿಯಾ ಚಿತ್ರ ಕೂಡ ವಿವಿಧ ತಾಣಗಳಲ್ಲಿ ಲೀಕ್‌ ಆಗಿದೆ. ಇದಷ್ಟೆ ಅಲ್ಲ ರಣವೀರ್‌ ಸಿಂಗ್‌ ನಟನೆಯ 83 ಹಾಗೂ ಸಲ್ಮಾನ್‌ ನಟನೆಯ ಅಂತಿಮ್‌ ದಿ ಫೈನಲ್‌ ಥ್ರೋ ಸೇರಿ ಹಲವು ಚಿತ್ರಗಳು ಲೀಕ್‌ ಆಗಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!