ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ರೈತರು ನಡೆಸುತ್ತಿರುವ ದೆಹಲಿ ಚಲೋ ರಾಷ್ಟ್ರ ರಾಜಧಾನಿ ತಲುಪುವ ಸಾಧ್ಯತೆ ಇದೆ.
ಕನಿಷ್ಠ ಬೆಂಬಲ ಬೆಲೆ ಹಾಗೂ ರೈತರಿಗೆ ಪಿಂಚಣಿ ಯೋಜನೆ ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ದೆಹಲಿ ಚಲೋ ಇಂದು ದೆಹಲಿ ತಲುಪುವ ಸಾಧ್ಯತೆ ಇರುವ ಕಾರಣ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ದೆಹಲಿಯ ಹೊರವಲಯದಲ್ಲಿ ಅಧಿಕಾರಿಗಳು ರಸ್ತೆಗೆ ರಾಡ್‌ಗಳನ್ನು ಹೊಡೆದಿದ್ದಾರೆ. ಪಂಜಾಬ್, ಹರಿಯಾಣ, ಕರ್ನಾಟಕ ಹಾಗೂ ಇನ್ನೂ ಹಲವು ರಾಜ್ಯದ ರೈತರು ದೆಹಲಿ ಚಲೋದಲ್ಲಿ ಭಾಗಿಯಾಗಿದ್ದಾರೆ. ರೈತರ ಪ್ರತಿಭಟನೆಯಲ್ಲಿ ಸಮಾಜ ವಿರೋಧಿ ಶಕ್ತಿಗಳು ಗಲಭೆಗೆ ಪ್ರೇರೇಪಿಸುವ ಸಾಧ್ಯತೆ ಇದ್ದು ಪೊಲೀಸ್ ಹೈ ಅಲರ್ಟ್ ಆಗಿದ್ದಾರೆ.
A glimpse of the preparations by the farmer union ‘Kisan Sangarsh Coordination Committee’ for the planned protest in Delhi.@iepunjab @IndianExpress
1/2 pic.twitter.com/O1iNYpdcoL
— Kamaldeep Singh ਬਰਾੜ (@kamalsinghbrar) February 11, 2024