ದೆಹಲಿ ಮದ್ಯ ಹಗರಣದಲ್ಲಿ ಮತ್ತೊಬ್ಬ ಅರೆಸ್ಟ್: ಇಡಿ ಬಂಧನದಲ್ಲಿ ಉದ್ಯಮಿ ಅಮಿತ್ ಅರೋರಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ಮದ್ಯ ಹಗರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಗುರ್ಗಾಂವ್‌ನಿಂದ ಪ್ರಮುಖ ಉದ್ಯಮಿ ಅಮಿತ್ ಅರೋರಾ ಅವರನ್ನು ಬಂಧಿಸಿದ್ದಾರೆ. ಅಮಿತ್ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ. ದೆಹಲಿಯ ಮದ್ಯ ನೀತಿ..ಹಣ ಲಾಂಡರಿಂಗ್ ಪ್ರಕರಣದಲ್ಲಿ ಅಮಿತ್ ಅರೋರಾ ಪ್ರಮುಖ ಪಾತ್ರ ವಹಿಸಿದ್ದಾರಂತೆ. ಈ ಘಟನೆಯಲ್ಲಿ ಬಂಧಿತರಾಗಿರುವ ಅಮಿತ್ ಅರೋರಾ ಅವರನ್ನು ಇಡಿ ಅಧಿಕಾರಿಗಳು ಬುಧವಾರ (ನವೆಂಬರ್ 30, 11, 2022) ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಸರ್ಕಾರಿ ಅಧಿಕಾರಿಗಳಿಗೆ ಮದ್ಯದ ಕಂಪನಿಗಳಿಂದ ಲಂಚ ನೀಡಿದ ಆರೋಪದಲ್ಲಿ ಅಮಿತ್ ಅರೋರಾ ಅವರನ್ನು ಬಂಧಿಸಲಾಯಿತು. ಸಿಬಿಐ ಮತ್ತು ಎಡಿ ಎಫ್‌ಐಆರ್‌ಗಳಲ್ಲಿ ಅಮಿತ್ ಅರೋರಾ 9ನೇ ಆರೋಪಿಯಾಗಿದ್ದು, ದೆಹಲಿ ಮದ್ಯ ಹಗರಣದಲ್ಲಿ ಇಡಿ ಅಧಿಕಾರಿಗಳು ಇದುವರೆಗೆ ಆರು ಜನರನ್ನು ಬಂಧಿಸಿದ್ದಾರೆ ಎಂದು ತಿಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!