ಇತಿಹಾಸ ನಿರ್ಮಿಸಿದ ಕಂಗನಾ ರಣಾವತ್, ರಾವಣ ಪ್ರತಿಕೃತಿ ದಹಿಸಿದ ಮೊದಲ ಮಹಿಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿನ್ನೆ (ಅಕ್ಟೋಬರ್ 24) ದಸರಾ ಆಚರಣೆಯ ಭಾಗವಾಗಿ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ರಾವಣ ಪ್ರತಿಕೃತಿ ದಹಿಸಿದ ಮೊದಲ ಮಹಿಳೆಯಾಗಿ ಬಾಲಿವುಡ್ ‘ಕ್ವೀನ್’ ಕಂಗನಾ ರಣಾವತ್‌ ಇತಿಹಾಸ ನಿರ್ಮಿಸಿದ್ದಾರೆ. ರಾವಣ, ಮೇಘನಾಥನ ಪ್ರತಿಕೃತಿಗಳನ್ನು ದಹಿಸಿ ಜೈ ಶ್ರೀರಾಮ್‌ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಕಂಗನಾಗೆ ಸಾಥ್‌ ಕೊಟ್ಟರು.

ಬಳಿಕ ಮಾತನಾಡಿದ ಕಂಗನಾ.. ‘ಶ್ರೀರಾಮನಿದ್ದಲ್ಲಿ ನಾವಿದ್ದೇವೆ..ಈ ಜಗತ್ತಿನಲ್ಲಿ ಅವನಂತೆ ಯಾರೂ ಇಲ್ಲ..ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಪಟಾಕಿ ನಿಷೇಧಿಸಿ ಸರಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಎಂಟು ಟ್ರ್ಯಾಕ್ ಡಿಜಿಟಲ್ ಡಾಲ್ಬಿ ಸೌಂಡ್ ಸಿಸ್ಟಂ ಮೂಲಕ ಪಟಾಕಿ ಸದ್ದು ರಾಮ್ ಲೀಲಾ ಮೈದಾನದಾದ್ಯಂತ ಆವರಿಸಿತ್ತು.

ಈ ಸಂದರ್ಭದಲ್ಲಿ ಕಂಗನಾ ಅಭಿನಯದ ತೇಜಸ್ ಅಕ್ಟೋಬರ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಸಿನಿಮಾ ಬಗ್ಗೆಯೂ ಮಾತನಾಡಿದ ನಟಿ ʻಶ್ರೀರಾಮನು ಕೆಡುಕಿನ ವಿರುದ್ಧ ಒಳಿತಿನ ವಿಜಯದ ಪತಾಕೆಯನ್ನು ಹಾರಿಸಿದಂತೆಯೇ ನಮ್ಮ ದೇಶದ ಸೈನಿಕರು ಕೂಡ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮ್ಮೆಲ್ಲರನ್ನೂ ರಕ್ಷಿಸುತ್ತಿದ್ದಾರೆʼ. ಈ ಕುರಿತ ಸಿನಿಮಾವನ್ನು ಎಲ್ಲರೂ ವೀಕ್ಷಿಸುವಂತೆ ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!