ಸಮರ್ಪಕ ಸೌಕರ್ಯ ಒದಗಿಸಲು ಮಾರ್ಕೆಟ್ ವರ್ತಕರ ಆಗ್ರಹ

ಹೊಸದಿಗಂತ ವರದಿ ಸೋಮವಾರಪೇಟೆ:

ಪಟ್ಟಣದ ಮಾರ್ಕೆಟ್ ಆವರಣದಲ್ಲಿರುವ ಕುರಿ,ಕೋಳಿ ಹಾಗೂ ಹಸಿ ಮೀನು ಮಾರುಕಟ್ಟೆ ಅತ್ಯಂತ
ದುಸ್ಥಿತಿಯಲ್ಲಿದೆ ಸಮರ್ಪಕ ವ್ಯವಸ್ಥೆ ಕಲ್ಪಿಸದೆ ಹರಾಜು ಪ್ರಕ್ರಿಯೆ ನಡೆಸಬೇಡಿ ಎಂದು ಇಂದು ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಪಂಚಾಯ್ತಿ ಅಧ್ಯಕ್ಷ ಚಂದ್ರು ಅಧ್ಯಕ್ಷತೆ ಯಲ್ಲಿನಡೆದ 2023-24ನೆ ಸಾಲಿನ ವಿವಿಧ ಮಾರುಕಟ್ಟೆ ಹರಾಜು ಸಂದರ್ಭ ವರ್ತಕರು ಆಗ್ರಹಪಡಿಸಿದರು.

ಮಾಂಸಾಹಾರಿ ಮಾರುಕಟ್ಟೆ ಕಟ್ಟಡ ಸೋರುತ್ತಿದೆ,ಸಮರ್ಪಕವಾಗಿ ನೀರು ಹರಿಯುವುದಿಲ್ಲ, ಕೋಳಿ ಮುಂತಾದ ಕಸ ಹಾಕಲು ಜಾಗವಿಲ್ಲ ಈ ಬಗ್ಗೆ ಕಳೆದ ಕೆಲವು ವರ್ಷಗಳಿಂದ ಪಂಚಾಯ್ತಿ ಆಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲವೆಂದರು.

ನಾವು ಲಕ್ಷಗಟ್ಟಲೆ ಹರಾಜುಕರೆದು ವ್ಯಾಪಾರ ಮಾಡುತ್ತೇವೆ ಆದರೆ ಬೇರೆಯವರು ಹೊರಜಿಲ್ಲೆಯಿಂದ ಬಂದು ಕೊಳಿವ್ಯಾಪಾರ ಮಾಡುತ್ತಾರೆ,ಬೆಸ್ತರು ಬಂದು ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡುತ್ತಾರೆ ಇದರಿಂದಾಗಿ ಒಂದೆಡೆ ವ್ಯಾಪಾರದಲ್ಲಿ ನಷ್ಟ ಅನುಭವಿಸುವಂತಗಿದೆ ಮತ್ತೊಂದೆಡೆ ಪಕ್ಕದ ಚೌಡ್ಲೂ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಡಿಮೆ ದರಕ್ಕೆ ಮಳಿಗೆ ಪಡೆದು ಕಡಿಮೆ ದರಕ್ಕೆ ವ್ಯಾಪಾರ ನಡೆಸುತ್ತಿದ್ದಾರೆ ಆದ್ದರಿಂದ ನಾವು ಅವರೊಡನೆ ಸ್ಪರ್ಧಾತ್ಮಕವಾಗಿ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅವಲತ್ತು ಕೊಂಡರು.

ಈ ಸಂದರ್ಭ ಅಧ್ಯಕ್ಷ ಚಂದ್ರು ಹಾಗೂ ಮುಖ್ಯಾಧಿಕಾರಿ ನಾಚಪ್ಪ ಪ್ರತಿಕ್ರಿಯಿಸಿ ಮುಂದಿನ ಮೂರು,ನಾಲ್ಕು ತಿಂಗಳಲ್ಲಿ ಕಟ್ಟಡ ದುರಸ್ತಿಪಡಿಸಲಾಗುವುದು ಹಾಗೂ ರಸ್ತೆ ಬದಿಯಲ್ಲಿ ಮೀನು ವ್ಯಾಪಾರ ಮಾಡುತಿರುವ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಪಂಚಾಯ್ತಿ ಉಪಾಧ್ಯಕ್ಷ ಸಂಜೀವ,ಸ್ಥಾಯಿ ಸಮಿತಿ ಅದ್ಯಕ್ಷೆ ಜಯಂತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!