ರಾಜಧಾನಿಯಲ್ಲಿ ಡೆಂಗ್ಯೂ ಉಲ್ಬಣ: 2970 ಜನರಿಗೆ ಸೋಂಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಉಲ್ಬಣವಾಗುತ್ತಿದೆ. ಎಲ್ಲ ವಯಸ್ಸಿನವರಲ್ಲಿಯೂ ಡೆಂಗ್ಯೂ (Dengue) ಜ್ವರ ಕಾಣಿಸಿಕೊಳ್ಳುತ್ತಿದ್ದು, ಇನ್ನಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ 30 ದಿನಗಳಲ್ಲಿ ರಾಜಧಾನಿಯಲ್ಲಿ ಬರೋಬ್ಬರಿ 2970 ಹೊಸ ಡೆಂಗ್ಯೂ ಕೇಸ್ ಪತ್ತೆಯಾಗಿದೆ. ಈ ಮೂಲಕ ಬೆಂಗಳೂರಿಗೆ ಡೆಡ್ಲಿ ಡೆಂಗ್ಯೂ ಭೀತಿ ಎದುರಾಗಿದೆ.

ಕಳೆದ ಒಂದು ತಿಂಗಳಿನಿಂದ ಬೆಂಗಳೂರು ನಗರದಲ್ಲಿ ಗರಿಷ್ಠ ಡೆಂಗ್ಯೂ ದಾಖಲಾಗಿದ್ದು, ಕಳೆದ ಮೂರು ವರ್ಷಗಳಲ್ಲಿಯೇ ಅಧಿಕ ಪ್ರಮಾಣದಲ್ಲಿ ದಾಖಲಾದ ಪ್ರಕರಣಗಳಾಗಿವೆ.

ರಾಜಧಾನಿಯಲ್ಲಿ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ದಾಖಲೆಯ 7673 ಹೊಸ ಡೆಂಗ್ಯೂ ಕೇಸ್ ಕಾಣಿಸಿಕೊಂಡಿದೆ. ಕಳೆದೊಂದೇ ತಿಂಗಳಲ್ಲಿ 2970 ಕೇಸ್ ಪತ್ತೆಯಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನವರಿಯಿಂದ ಇಲ್ಲಿಯವರೆಗೆ 7228 ಕೇಸ್ ದಾಖಲಾಗಿದ್ರೆ ಕೇವಲ ಬೆಂಗಳೂರಿನಲ್ಲಿ 7673 ಡೆಂಗ್ಯೂ ಕೇಸ್ ಪತ್ತೆಯಾಗಿವೆ. ರಾಜಧಾನಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಬಗ್ಗೆ ವೈದ್ಯರು ನಿರ್ಲಕ್ಷ್ಯವಹಿಸದಂತೆ ಎಚ್ಚರಿಕೆನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಜ್ವರ, ಶೀತ, ಕೆಮ್ಮು ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೇ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!