ದೆಹಲಿಯಲ್ಲಿ ದಟ್ಟ ಮಂಜಿನ ವಾತಾವರಣ: 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ದಟ್ಟವಾದ ಮಂಜು ಆವರಿಸಿದ್ದು, 25 ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಇಂದು ಸ್ಪಷ್ಟ ಗೋಚರತೆ ಕಡಿಮೆಯಾಗಿದೆ ಮತ್ತು ದಟ್ಟವಾದ ಮಂಜಿನ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 25 ರೈಲುಗಳ ಸೇವೆಯಲ್ಲಿ ಮುಂಜಾನೆ ವಿಳಂಬಗೊಂಡವು.

ನಗರದಲ್ಲಿ ಕನಿಷ್ಠ ತಾಪಮಾನ 10.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗ್ಗೆ 5 ರಿಂದ 5.30ರ ನಡುವೆ ಪಾಲಂನಲ್ಲಿ 11-13 ಕಿ.ಮೀ ವೇಗದಲ್ಲಿ ವಾಯುವ್ಯ ಗಾಳಿ ಹಾಗೂ ದಟ್ಟವಾದ ಮಂಜಿನಲ್ಲಿ ಕನಿಷ್ಠ 150 ಮೀ. ಗೋಚರತೆ ಕಂಡುಬಂದಿದೆ.

ಬೆಳಿಗ್ಗೆ 8.30ರ ಹೊತ್ತಿಗೆ 13 ಕಿ.ಮೀ ವೇಗದಲ್ಲಿ ಪಶ್ಚಿಮ ಗಾಳಿ ಹಾಗೂ ಮಂಜಿನಲ್ಲಿ ಕ್ರಮೇಣ 700 ಮೀ.ಗೆ ಸುಧಾರಿಸಿತ್ತು ‘ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಮಂಜು ಮುಸುಕಿದ ವಾತಾವರಣದಿಂದಾಗಿ ಒಟ್ಟು 25 ರೈಲುಗಳು ಬೆಳಗ್ಗೆ 6 ಗಂಟೆಯವರೆಗೆ ವಿಳಂಬಗೊಂಡಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!