October 12, 2026
Monday, October 12, 2026
spot_img

ನೇಪಾಳ-ಟಿಬೆಟ್ ಭೀಕರ ಪ್ರವಾಹ: ಮೃತರ ಸಂಖ್ಯೆ 472ಕ್ಕೆ ಏರಿಕೆ, ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳ ಮತ್ತು ಟಿಬೆಟ್ ಗಡಿಭಾಗದ ಭೋಟಿ ಕೋಶಿ ಹಾಗೂ ತ್ರಿಶೂಲಿ ನದಿ ಪಾತ್ರಗಳಲ್ಲಿ ಹಠಾತ್ ಜಲಪ್ರಳಯ ಮತ್ತು ಸರಣಿ ಭೂಕುಸಿತ ಸಂಬವಿಸಿ ಎರಡು ದಿನ‌ಕಳೆದರೂ ನಲುಗಿರುವ ಗಡಿ ಭಾಗ ಇನ್ನೂ ಚೇತರಿಸಿಕೊಡಿಲ್ಲ.

ಸಾವಿನ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೇ ಇದ್ದು, ನೇಪಾಳ ಪೊಲೀಸರ ಅಧಿಕೃತ ಮಾಹಿತಿಯಂತೆ ಈವರೆಗೆ 469ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದರೆ. ಇನ್ನು ಟಿಬೆಟ್ ಭಾಗದಲ್ಲಿಯೂ ಮೂವರು ಮೃತಪಟ್ಟಿರುವುದನ್ನು ಚೀನಾ ಮಾಧ್ಯಮಗಳು ದೃಢಪಡಿಸಿವೆ. ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 472ಕ್ಕೇರಿದೆ.

ವಿದೇಶಿ ಪ್ರವಾಸಿಗರು, ಕೈಲಾಸ ಮಾನಸಸರೋವರ ಯಾತ್ರಿಕರು ಹಾಗೂ ಸ್ಥಳೀಯ ನಿವಾಸಿಗಳು ಸೇರಿದಂತೆ ಸುಮಾರು 1,400ಕ್ಕೂ ಅಧಿಕ ಜನರು ಕಣ್ಮರೆಯಾಗಿದ್ದಾರೆ. ಇದರಲ್ಲಿ 228,ಕ್ಕೂ ಹೆಚ್ಚು ಭಾರತೀಯ ಯಾತ್ರಿಕರೂ ಸೇರಿದ್ದಾರೆ.

ಸಂತ್ರಸ್ತ ಸ್ಥಳಗಳಲ್ಲಿ‌ ನೇಪಾಳಿ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ಚೀನಾದ ತುರ್ತು ರಕ್ಷಣಾ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. 14ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು ಮತ್ತು ಅತ್ಯಾಧುನಿಕ ರಕ್ಷಣಾ ದೋಣಿಗಳನ್ನು ಬಳಸಿ ದುರ್ಗಮ ಬೆಟ್ಟ-ಗುಡ್ಡಗಳಲ್ಲಿ ಸಿಲುಕಿರುವವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಪ್ರಧಾನಿ ಮೋದಿ ಅಭಯ

ಘಟನೆಗೆ ತೀವ್ರ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳ ಸರ್ಕಾರಕ್ಕೆ ಅಗತ್ಯವಿರುವ ಎಲ್ಲಾ ಮಾನವೀಯ ಮತ್ತು ತಾಂತ್ರಿಕ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಅಭಯ ನೀಡಿದ್ದಾರೆ.

Must Read