October 7, 2026
Wednesday, October 7, 2026
spot_img

2047ರ ವೇಳೆಗೆ ವಿಕಸಿತ ಭಾರತ : ನಾವು ಮಾಡಿಯೇ ತೀರುತ್ತೇವೆ ಎಂದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿ ನಮ್ಮ ಮುಂದಿದೆ. ಇದನ್ನು ಮಾಡಿಯೇ ತೀರುತ್ತೇವೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮಾತನಾಡಿ, ದೂರದೃಷ್ಟಿಯ ನೀತಿಗಳು ಹಾಗೂ ನಿರಂತರ ಪರಿಶ್ರಮದ ಮೂಲಕ ಈ ಗುರಿಯನ್ನು ಸಾಧಿಸಬಹುದು. ದೇಶ ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಸಮಾಜವನ್ನು ಮತಗಳ ಆಧಾರದಲ್ಲಿ ವಿಭಜಿಸುವುದೂ ಒಂದಾಗಿದೆ. ರೈತನ ಹೊಲದಲ್ಲಿ ನೀರಿಲ್ಲದಿದ್ದಾಗ, ಆ ಸಮಸ್ಯೆ ಕೇವಲ ಒಂದು ಜಾತಿಗೆ ಮಾತ್ರವೇ ಕಾಡುತ್ತದೆಯೇ? ವಿದ್ಯುತ್ ಇಲ್ಲದಿದ್ದಾಗ ಕತ್ತಲೆ ಕೇವಲ ಒಂದು ಸಮುದಾಯದ ಮೇಲೆ ಮಾತ್ರ ಆವರಿಸುತ್ತದೆಯೇ? ಉತ್ತರ ಇಲ್ಲ. ಸಮಸ್ಯೆ ಎಲ್ಲರದ್ದಾಗಿದ್ದರೆ, ಪರಿಹಾರವೂ ಎಲ್ಲರಿಗೂ ಇರಬೇಕು ಎಂದು ಹೇಳಿದರು.

ಭಾರತ ನಿಲ್ಲಲು ಯಾವುದೇ ಕಾರಣವಿಲ್ಲ. ನೂರು ವರ್ಷಗಳ ಹಿಂದೆ ನಾವು 40 ಕೋಟಿಗಿಂತಲೂ ಕಡಿಮೆ ಜನರಿದ್ದೆವು. ಇಂದು ನಮ್ಮ ಜನಸಂಖ್ಯೆ 140 ಕೋಟಿಗೂ ಅಧಿಕವಾಗಿದೆ. 140 ಕೋಟಿ ಭಾರತೀಯರು ಒಗ್ಗೂಡಿ 2047ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸಲಿದ್ದಾರೆ. ನಾವು ಖಂಡಿತವಾಗಿಯೂ ಮಾಡುತ್ತೇವೆ. ನಾವು ಇದನ್ನು ಮಾಡಿಯೇ ತೀರುತ್ತೇವೆ ಎಂದು ಹೇಳಿದರು.

ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಸ್ಥಾನ! ನಾವು ಇದನ್ನು ಮಾಡಿಯೇ ತೀರುತ್ತೇವೆ. ಆತ್ಮನಿರ್ಭರ ಭಾರತ! ನಾವು ಇದನ್ನು ಮಾಡಿಯೇ ತೀರುತ್ತೇವೆ. ಜಾಗತಿಕ ಉತ್ಪಾದನಾ ಕೇಂದ್ರ! ನಾವು ಇದನ್ನು ಮಾಡಿಯೇ ತೀರುತ್ತೇವೆ. ಒಲಿಂಪಿಕ್ಸ್ ಆಯೋಜನೆ! ನಾವು ಇದನ್ನು ಮಾಡಿಯೇ ತೀರುತ್ತೇವೆ. ಬಾಹ್ಯಾಕಾಶಕ್ಕೆ ಹೆಜ್ಜೆ! ನಾವು ಇದನ್ನು ಮಾಡಿಯೇ ತೀರುತ್ತೇವೆ. ಈ ಶಕ್ತಿ, ಈ ಉತ್ಸಾಹ, ಈ ಆತ್ಮವಿಶ್ವಾಸ ಅಸಾಧಾರಣ ಎಂದು ಮೋದಿ ಹೇಳಿದರು.

Must Read