November 9, 2026
Monday, November 9, 2026
spot_img

ಅನೈತಿಕ ಸಂಬಂಧ ಪ್ರಶ್ನಿಸಿದ್ದ ಮಗನ ಕೊ*ಲೆ: ತಾಯಿ ಸೇರಿ 6 ಮಂದಿ ಅರೆಸ್ಟ್

ಹೊಸದಿಗಂತ ವರದಿ ಬೆಳಗಾವಿ:

ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದ ಸ್ವಂತ ಮಗನನ್ನೇ ಕೊಲೆ ಮಾಡಿಸಿದ ಬೆಂಗಳೂರು ಮೂಲದ ತಾಯಿ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಓರ್ವ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.

ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೆಎಲ್ಇ ಛತ್ರಿ ಸಮೀಪದ ಗಟಾರದಲ್ಲಿ ನ.3ರಂದು ಅಪರಿಚಿತ ಯುವಕನ ಶವ ಪತ್ತೆಯಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ನ.4ರಂದು ಬೆಂಗಳೂರು ಆರ್.ಟಿ. ನಗರದ ಮೀನಾ ನಾರಾಯಣ (44) ಎಂಬಾಕೆಯನ್ನು ಸಂಪರ್ಕಿಸಿದಾಗ, ಮೃತ ಯುವಕ ತನ್ನ ಮಗ ವಿಜಯ ನಾರಾಯಣ (24) ಎಂದು ಗುರುತಿಸಿದ್ದರು.

ವಿಚಾರಣೆ ವೇಳೆ ಮಗನ ಕೊಲೆಗೆ ತಾಯಿ ಮೀನಾ, ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ರಾಕೇಶ ಪರಶುರಾಮ ಜಾಮೂನಿ (34) ಜೊತೆ ಸೇರಿ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ. ಅದರಂತೆ ರಾಕೇಶ ತನ್ನ ಸಹಚರರೊಂದಿಗೆ ಸೇರಿ ವಿಜಯನಿಗೆ ನಿದ್ದೆ ಮಾತ್ರೆ ಬೆರೆಸಿದ ತಂಪು ಪಾನೀಯ ಕುಡಿಸಿ ಪ್ರಜ್ಞೆ ತಪ್ಪಿಸಿದ್ದಾನೆ. ಬಳಿಕ ಕಾರಿನಲ್ಲೇ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದ ಗಟಾರದಲ್ಲಿ ಎಸೆದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕೇಶ ಜಾಮೂನಿ, ಮೀನಾ ನಾರಾಯಣ, ಸಚಿನ ಕಾಂಬಳೆ, ಮನೋಜ ಕಾಂಬಳೆ, ತಮ್ಮಣ್ಣ ಕಾಂಬಳೆ ಹಾಗೂ ಏಕನಾಥ ಕಾಂಬಳೆ ಅವರನ್ನು ಬಂಧಿಸಲಾಗಿದೆ. ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರಿದಿದೆ.

ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಅವರು ಮಾಧ್ಯಮಗಳಿಗೆ ಈ ಪ್ರಕರಣದ ಕುರಿತು ಮಾಹಿತಿ ಹಚ್ಚಿಕೊಂಡಿದ್ದಾರೆ.

Must Read

Skip to toolbar