ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ಕ್ಷೇತ್ರದಲ್ಲಿ ಭಕ್ತರೊಬ್ಬರು ಕಾಣಿಕೆ ಹುಂಡಿಗೆ ಕನ್ನ ಹಾಕಿದ್ದಾರೆ.
ತಿರುಮಲ ದೇವರ ದರ್ಶನಕ್ಕೆ ಬಂದ ತಮಿಳುನಾಡಿನ ಭಕ್ತನೊಬ್ಬ ಕಳ್ಳತನ ಮಾಡಿದ್ದಾನೆ. ದೇವರ ಹುಂಡಿಯಲ್ಲಿದ್ದ ಹಣವನ್ನು ಆತ ಕಳ್ಳತನ ಮಾಡಿದ್ದಾನೆ. ಸಿಸಿ ಕ್ಯಾಮರಾ ಮೇಲೆ ನಿಗಾ ಇಟ್ಟಿದ್ದ ಆಡಳಿತ ಸಿಬ್ಬಂದಿಯಾದ ಜ್ಞಾನೇಂದ್ರ ಎಂಬುವವರು ಇದನ್ನು ಪತ್ತೆ ಹಚ್ಚಿ ವಿಜಿಲೆನ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಭಕ್ತನ ಸೋಗಿನಲ್ಲಿ ಬಂದಿದ್ದ ಕಳ್ಳನ ಪ್ರಕರಣ ಬಯಲಾಗಿದೆ. ಹುಂಡಿ ಕಳ್ಳತನ ಮಾಡಿದ ಭಕ್ತನನ್ನು ಹಿಡಿದು ಆತನಿಂದ 15 ಸಾವಿರ ರೂ. ವಸೂಲಿ ಮಾಡಲಾಗಿದೆ.
ಆತನನ್ನು ತಮಿಳುನಾಡು ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದ್ದು. ನಂತರ ವಿಜಿಲೆನ್ಸ್ ಅಧಿಕಾರಿಗಳು ತಿರುಮಲ ಒನ್ ಟೌನ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಇದೇ ತಿಂಗಳ 23ರಂದು ಮಧ್ಯಾಹ್ನ 2 ಗಂಟೆಗೆ ಘಟನೆ ನಡೆದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.