Tuesday, August 9, 2022

Latest Posts

ಮೊಣಕಾಲುದ್ದ ನೆರೆ ನೀರನ್ನೂ ಲೆಕ್ಕಿಸದೆ ಮಧೂರು ಪುಣ್ಯ ಕ್ಷೇತ್ರಕ್ಕೆ ಭಕ್ತರ ಆಗಮನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಸರಗೋಡು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಇನ್ನಷ್ಟು ಹೆಚ್ಚಿದ್ದು ಮಧುವಾಹಿನಿ ತುಂಬಿ ಹರಿದ ಪರಿಣಾಮ ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ಆವರಣದಲ್ಲಿ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ದೇಸ್ಥಾನದ ಆವರಣವಲ್ಲದೆ ಅಕ್ಕಪಕ್ಕದ ಪೇಟೆ ಪರಿಸರದಲ್ಲಿಯೂ ನೆರೆ ನೀರು ತುಂಬಿಕೊಂಡಿದ್ದು, ಭಕ್ತಾದಿಗಳು ಭಾರೀ ಸಾಹಸಪಟ್ಟು ದೇವರ ದರುಶನ ಪಡೆಯುತ್ತಿದ್ದಾರೆ.

ಮಳೆ ತೀವ್ರಗೊಂಡಂತೆ ಪ್ರತೀ ಬಾರಿ ಮಧುವಾಹಿನಿ ಉಕ್ಕುವುದು ಸಾಮಾನ್ಯವಾಗಿದೆ. ಈ ಬಾರಿ ಮೂರ್ನಾಲ್ಕು ಅಡಿಗಳ ತನಕ ನೀರಿನಮಟ್ಟ ಏರಿಕೆಯಾಗಿದೆ. ನೆರೆ ನೀರಿನಲ್ಲೂ ಭಕ್ತಭಾವದಿಂದ ಭಕ್ತಾದಿಗಳು ದೇವರ ದರುಶನ ಪಡೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss