ರಾಮನ ಕಾಣಲು ಭಕ್ತರ ದಂಡು: 6 ದಿನದಲ್ಲಿ ಬರೋಬ್ಬರಿ 19 ಲಕ್ಷ ಜನರ ಆಗಮನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮ ಮಂದಿರ ಲೋಕಾರ್ಪಣೆಗೊಂಡು ವಾರಗಳು ಉರುಳಿದ್ದು, ಕಳೆದ 6 ದಿನಗಳಲ್ಲಿ ಬರೋಬ್ಬರಿ 19 ಲಕ್ಷ ರಾಮ ಭಕ್ತರು ಆಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ರಾಮಲಲಾ ದರುಶನ ಪಡೆದಿದ್ದಾರೆ.

ಜನವರಿ 22ರಂದು ಪ್ರಧಾನಿ ಮೋದಿ ರಾಮಲಲಾ ಪ್ರಾಣಪ್ರತಿಷ್ಠೆ ಮಾಡಿ ಮಂದಿರವನ್ನು ಲೋಕಾರ್ಪಣೆಗೊಳಿಸಿದ್ದರು. ಜನವರಿ 23ರಿಂದಲೇ ರಾಮ ಮಂದಿರ ಭಕ್ತರ ದರ್ಶನಕ್ಕೆ ಮುಕ್ತವಾಗಿತ್ತು. ಇದಾದ ಬಳಿಕ ಅತೀವ ಚಳಿಯ ನಡುವೆಯೂ ದಾಖಲೆ ಪ್ರಾಣದಲ್ಲಿ ಭಕ್ತರು ರಾಮ ದರುಶನ ಮಾಡಿದ್ದಾರೆ.

ಪ್ರತಿ ದಿನ ರಾಮ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಉತ್ತರ ಪ್ರದೇಶ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ರಾಮ ಭಕ್ತರ ದರುಶನ ವಿವರ ಬಹಿರಂಗಪಡಿಸಿದೆ. ಜನವರಿ 23 ರಿಂದ ಜನವರಿ 28ರ ವರೆಗೆ 18.75 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ

ಜನವರಿ 23: 5 ಲಕ್ಷ ಭಕ್ತರು
ಜನವರಿ 24: 2.5 ಲಕ್ಷ ಭಕ್ತರು
ಜನವರಿ 25: 2 ಲಕ್ಷ ಭಕ್ತರು
ಜನವರಿ 26: 3.5 ಲಕ್ಷ ಭಕ್ತರು
ಜನವರಿ 27: 2.5 ಲಕ್ಷ ಭಕ್ತರು
ಜನವರಿ 28: 3.25 ಲಕ್ಷ ಭಕ್ತರು

ಜನವರಿ 23 ಹಾಗೂ ಜನವರಿ 24 ರಂದು ಆಯೋಧ್ಯೆ ರಾಮ ಭಕ್ತರಿಂದ ತುಂಬಿ ಹೋಗಿತ್ತು. ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದರು. ಹೀಗಾಗಿ ಆಯೋಧ್ಯೆಗೆ ತೆರಳುವ ಉತ್ತರ ಪ್ರದೇಶದ ಸಾರಿಗೆ ಸಂಸ್ಥೆಗಳ ಬಸ್‌ಗಳನ್ನು ರದ್ದು ಮಾಡಲಾಗಿದೆ. ಸುಮಾರು 900ಕ್ಕೂ ಹೆಚ್ಚು ಬಸ್‌ಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿತ್ತು.

ಆಯೋಧ್ಯೆಯ ಎಲ್ಲಾ ಹೊಟೆಲ್, ರೂಂ ಬುಕ್ ಆಗಿವೆ. ಹೀಗಾಗಿ ಆಯೋಧ್ಯೆಗೆ ಆಗಮಿಸುವ ಭಕ್ತರಿಗೆ ರೂಂ ಸಿಗುವುದು ಕಷ್ಟವಾಗಿದೆ. ಇದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ರಾಮ ಭಕ್ತರಿಗೆ ಎಲ್ಲಾ ವ್ಯವಸ್ಥೆಗೆ ಸೂಚನೆ ನೀಡಿದೆ.ರಾಮ ಭಕ್ತರು ಸರಾಗವಾಗಿ ಬಾಲಕ ರಾಮನ ದರುಶನ ಪಡೆಯಲು ಅನುವು ಮಾಡಿಕೊಡಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!