ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಗುರು ಗೋಬಿಂದ್ ಸಿಂಗ್ ಅವರ 356ನೇ ಜಯಂತಿ ಹಿನ್ನೆಲೆ ಅಮೃತಸರದ ಗೋಲ್ಡನ್ ಟೆಂಪಲ್ನಲ್ಲಿ ಸಾವಿರಾರು ಭಕ್ತರು ಪ್ರಾರ್ಥನೆ ಸಲ್ಲಿಸಿದರು. ಸಿಖ್ಖರ 10 ನೇ ಮತ್ತು ಕೊನೆಯ ಗುರುವಾದ ಗುರು ಗೋಬಿಂದ್ ಸಿಂಗ್ ಅವರು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ.
ಪ್ರತಿ ವರ್ಷ, ಜಗತ್ತಿನಾದ್ಯಂತ ಸಿಖ್ಖರು ಗುರುದ್ವಾರಗಳಲ್ಲಿ ಸಿಖ್ ಗುರುಗಳಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಭಜನೆಗಳು ಮತ್ತು ಕೀರ್ತನೆಗಳನ್ನು ಸಹ ಅವರ ಗೌರವಾರ್ಥವಾಗಿ ಆಯೋಜಿಸಲಾಗುತ್ತದೆ.