ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಧುರಂಧರ್’ ಸಿನಿಮಾದ ‘ಶರಾರತ್’ ಹಾಡಿನ ಮೂಲಕ ಪ್ರೇಕ್ಷಕರ ಮನ ಗೆದಿದ್ದ ಗ್ಲಾಮರಸ್ ನಟಿ ಆಯೇಷಾ ಖಾನ್, ಮತ್ತೆ ತಮ್ಮ ಹೊಸ ಪೋಸ್ಟ್‌ನಿಂದ ಸೋಶಿಯಲ್ ಮೀಡಿಯಾ ಸಖತ್ ಸುದ್ದಿಯಲ್ಲಿದ್ದಾರೆ.

ಮಿಸ್ಟ್ರಿ ಮ್ಯಾನ್ ಹಾಗೂ ವಜ್ರದ ಉಂಗುರದ ರಹಸ್ಯ
ಆಯೇಷಾ ಖಾನ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಮಿಸ್ಟ್ರಿ ಮ್ಯಾನ್’ ಜೊತೆಗಿನ ಕೆಲವು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ನಟಿಯ ಬೆರಳಿನಲ್ಲಿ ಹೊಳೆಯುತ್ತಿರುವ ವಜ್ರದ ಉಂಗುರ ಪ್ರತಿಯೊಬ್ಬರ ಗಮನ ಸೆಳೆಯುತ್ತಿದೆ. ಇದನ್ನು ಕಂಡ ಅಭಿಮಾನಿಗಳು ನಟಿ ಆಯೇಷಾ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿರಬಹುದು ಎಂದು ತೀವ್ರ ಚರ್ಚೆ ನಡೆಸುತ್ತಿದ್ದಾರೆ. ಆದರೆ, ಆಯೇಷಾ ತಮ್ಮ ಜೊತೆಗಿರುವ ವ್ಯಕ್ತಿಯ ಮುಖವನ್ನು ಎಲ್ಲಿಯೂ ತೋರಿಸದೆ ರಹಸ್ಯ ಕಾಯ್ದುಕೊಂಡಿದ್ದಾರೆ.

ಬ್ರ್ಯಾಂಡ್ ಫೋಟೋಶೂಟ್ ಇರಬಹುದೇ?
ಈ ವೈರಲ್ ಫೋಟೋಗಳ ಹಿಂದೆ ಒಂದು ಸಣ್ಣ ಟ್ವಿಸ್ಟ್ ಕೂಡ ಇದೆ. ಕೈಯಲ್ಲಿ ಡೈಮಂಡ್ ರಿಂಗ್ ಇದ್ದರೂ ನಟಿ ಎಲ್ಲೂ ನಿಶ್ಚಿತಾರ್ಥದ ಬಗ್ಗೆ ಹೇಳಿಕೊಂಡಿಲ್ಲ. ಹೀಗಾಗಿ ಇದು ಯಾವುದಾದರೂ ಖ್ಯಾತ ಜ್ಯುವೆಲ್ಲರಿ ಬ್ರ್ಯಾಂಡ್‌ನ ಪ್ರಮೋಷನಲ್ ಫೋಟೋಶೂಟ್ ಇರಬಹುದು ಎನ್ನಲಾಗುತ್ತಿದೆ. ತಮ್ಮ ವೃತ್ತಿಪರ ಕೆಲಸಗಳಿಗೆ ಸದಾ ಬದ್ಧರಾಗಿರುವ ಆಯೇಷಾ, ಪ್ರತಿಯೊಂದು ಪ್ರಾಜೆಕ್ಟ್‌ನಲ್ಲೂ ಹೊಸತನ ತರಲು ಇಷ್ಟಪಡುತ್ತಾರೆ.

ಕಠಿಣ ಶ್ರಮದಿಂದ ಗೆದ್ದ ನಟಿ
ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರದ ‘ಶರಾರತ್’ ಹಾಡಿನಲ್ಲಿ ಕ್ರಿಸ್ಟಲ್ ಡಿಸೋಜಾ ಜೊತೆ ಆಯೇಷಾ ಅದ್ಭುತವಾಗಿ ಹೆಜ್ಜೆ ಹಾಕಿದ್ದರು. ಕರಾಚಿ ಮದುವೆಯ ಶೈಲಿಯಲ್ಲಿ ಮೂಡಿಬಂದ ಈ ಹಾಡಿನ ಶೂಟಿಂಗ್ ವೇಳೆ ತಮಗೆ ಪೀರಿಯಡ್ಸ್ ಇದ್ದು, ತೀವ್ರ ಆಯಾಸದ ನಡುವೆಯೂ ಅದ್ಭುತ ಡ್ಯಾನ್ಸ್ ಪ್ರದರ್ಶನ ನೀಡಿದ್ದರು. ಕಷ್ಟಕರ ಪರಿಸ್ಥಿತಿಯಲ್ಲೂ ನಟಿ ತೋರಿಸಿದ ವೃತ್ತಿಪರತೆ ಮತ್ತು ಶ್ರಮಕ್ಕೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಅಧಿಕೃತ ಸ್ಪಷ್ಟನೆಗೆ ಕಾಯುತ್ತಿರುವ ಅಭಿಮಾನಿಗಳು
ಪ್ರಸ್ತುತ ವೈರಲ್ ಆಗಿರುವ ಈ ಫೋಟೋಗಳ ಬಗ್ಗೆ ಆಯೇಷಾ ಖಾನ್ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಅದು ಅವರ ವೈಯಕ್ತಿಕ ಜೀವನದ ಸಿಹಿ ಸುದ್ದಿಯಾಗಿರಲಿ ಅಥವಾ ಹೊಸ ಪ್ರಾಜೆಕ್ಟ್ ಆಗಿರಲಿ, ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟಿಯಿಂದ ಶೀಘ್ರವೇ ಬರುವ ಅಧಿಕೃತ ಅನೌನ್ಸ್‌ಮೆಂಟ್‌ಗಾಗಿ ಕಾಯುತ್ತಿದ್ದಾರೆ.



