ಮಧುಮೇಹ ನಿಯಂತ್ರಿಸೋಕೆ ಈ ಏಳು ತರಹದ ಚಹಾ ಟ್ರೈ ಮಾಡಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಕ್ಕರೆ ಕಾಯಿಲೆ ಬಂದವರಿಗೆ ಆಹಾರ ಸೇವನೆಯ ನಿಯಂತ್ರಣ ಬಲು ಕಷ್ಟಿ. ಬೇಡ ಅನ್ನೋದನ್ನ ಬೇಕು ಅಂತ ತಿನ್ನುವ ಮನಸ್ಥಿತಿಗೆ ಕೆಲವರು ಬಂದಿರುತ್ತಾರೆ. ಅಂತಹವರ ಆರೋಗ್ಯ ಸುಧಾರಿಸೋಕೆ ಇಲ್ಲಿದೆ ಕೆಲವು ಮನೆಮದ್ದುಗಳು, ದಿನಕ್ಕೆ ಒಂದರಂತೆ 7 ದಿನಕ್ಕೆ 7 ತರಹದ ಚಹಾ ಕುಡಿದು ಮಧುಮೇಹ ನಿಯಂತ್ರಿಸಬಹುದು.

ಶುಂಠಿ ಟೀ: ಈ ಟೀ ಸೇವಿಸುವುದರಿಂದ ಒತ್ತಡ ಕಡಿಮೆಯಾಗುವುದರ ಜತೆಗೆ ಮಧುಮೇಹವನ್ನೂ ನಿಯಂತ್ರಿಸುತ್ತೆ.

ಅಲೋವೆರಾ ಟೀ: ನೀರಿಗೆ ಅಲೋವೆರಾ ಜೆಲ್‌ ಮಿಕ್ಸ್‌ ಮಾಡಿ ಕುದಿಸಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ

ಕರ್ಪೂರದ ಎಲೆಯ ಟೀ: ಇದರಲ್ಲಿ ಆಂಟಿ ಆಕ್ಸಿಡೆಂಟ್‌ ಅಂಶ ಹೆಚ್ಚಾಗಿದ್ದು, ದೇಹಕ್ಕೆ ಹೆಚ್ಚು ಶಕ್ತಿ ಕೊಡುವುದರ ಜತೆಗೆ ಮಧುಮೇಹ ನಿಯಂತ್ರಿಸುತ್ತೆ.

ದಾಸವಾಳ ಟೀ: ದಾಸವಾಳ ಹೂವನ್ನು ಕುದಿಸಿ ಕುಡಿಯುವುದರಿಂದ ರಕ್ತದೊತ್ತಡ ಹಾಗೂ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ಚಕ್ಕೆ ಟೀ: ಚಕ್ಕೆ ಪುಡಿ ಮಾಡಿ ನೀರಿನಲ್ಲಿ ಕುದಿಸಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣವಾಗುತ್ತದೆ.

ನಿಂಬು ಟೀ: ಇದರ ಸೇವನೆಯಿಂದ ದೇಹದ ತೂಕ ನಿಯಂತ್ರಣದ ಜತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.

ಪುದೀನ ಟೀ: ಇದರಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟ್‌ ಅಂಶಗಳಿದ್ದು, ಇದನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!