Wednesday, December 7, 2022

Latest Posts

ಮಾಧ್ಯಮಗಳನ್ನು ತಿರುಚಿ ಆಪ್‌ ʼವೈಫಲ್ಯʼಗಳನ್ನು ಮುಚ್ಚಿಟ್ಟರಾ ಕೇಜ್ರಿವಾಲ್ ?:‌ ಮಾಜಿ ಎಎಪಿ ಸಂಸ್ಥಾಪಕ ಸದಸ್ಯ ಅಶುತೋಷ್ ಬಿಚ್ಚಿಟ್ಟ ಅಂಶವಿದು !

ಹೊಸದಿಗಂತ ಡಿಜಿಟಟಲ್‌ ಡೆಸ್ಕ್:‌

ದೆಹಲಿಯ ಆಪ್‌ ಸರ್ಕಾರದ ಭ್ರಷ್ಟಾಚಾರ ಮತ್ತು ವಿವಾದಗಳು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಅಷ್ಟಾಗಿ ಬಿತ್ತರವಾಗುವುದಿಲ್ಲ. ಈ ಕುರಿತು ಮಾಧ್ಯಮಗಳೂ ಮೌನವಾಗಿರುತ್ತವೆ ಎಂಬ ಅಂಶ ಗುಟ್ಟಾಗೇನೂ ಉಳಿದಿಲ್ಲ. ಇದು ಆಪ್‌ ಸರ್ಕಾರವು ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳಲ್ಲಿ ಪ್ರಕಟಿಸುವ ಜಾಹೀರಾತುಗಳೊಂದಿಗೆ ನೇರವಾಗಿ ಸಂಬಂಧಿಸಿದೆ ಎಂಬ ವಿಷಯ ಭಾರೀ ಚರ್ಚೆಯಲ್ಲಿದೆ. ಇದೀಗ ಈ ವಿಷಯವನ್ನು ಆಪ್‌ ನ ಸಂಸ್ಥಾಪಕ ಸದಸ್ಯರುಗಳಲ್ಲೊಬ್ಬರಾದ ಪತ್ರಕರ್ತ ಅಶುತೋಷ್ ಖಚಿತ ಪಡಿಸಿದ್ದಾರೆ ಎಂದು ಒಪಿಂಡಿಯಾ ವರದಿ ಮಾಡಿದೆ.

ನ್ಯೂಸ್‌ಎಕ್ಸ್ ಚಾನೆಲ್‌ನಲ್ಲಿ ದಿ ರೌಂಡ್‌ಟೇಬಲ್ ವಿತ್ ಪ್ರಿಯಾ ಸಾಹಗಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಶುತೋಷ್ ಅವರು ಗುಜರಾತ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಾಗಿ ‘ಗುಜರಾತ್ ಪ್ರಚಾರದ ಡಿಕೋಡಿಂಗ್’ ವಿಷಯದ ಕುರಿತು ಚರ್ಚಿಸುವಾಗ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಕೆಲವು ಮಾಧ್ಯಮ ಸಂಸ್ಥೆಗಳು ಎಎಪಿ ಬಗ್ಗೆ ಯಾವುದೇ ಋಣಾತ್ಮಕ ಸುದ್ದಿಯನ್ನು ಪ್ರಕಟಿಸಿದಾಗ, ಆ ಮಾಧ್ಯಮ ಸಂಸ್ಥೆಗೆ ಜಾಹೀರಾತು ನೀಡುವುದನ್ನು ಎಎಪಿ ಸರ್ಕಾರ ಮತ್ತು ಎಎಪಿ ಪ್ರಾಬಲ್ಯ ಹೊಂದಿರುವ ದೆಹಲಿ ವಿಧಾನಸಭೆಯ ಉಪಕ್ರಮಗಳು ಕೆಲವು ನೆಪದಲ್ಲಿ ತಕ್ಷಣವೇ ನಿಲ್ಲಿಸುತ್ತವೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ಮಾಧ್ಯಮಗಳನ್ನು ಕುಶಲತೆಯಿಂದ ಬಳಸುತ್ತಿದ್ದಾರೆ ಎಂದು ಹಲವರು ಆರೋಪಿಸುತ್ತಾರೆ. ಆದರೆ ಅರವಿಂದ್ ಕೇಜ್ರಿವಾಲ್ ಅವರು ಆ ವಿಷಯದಲ್ಲಿ ಇನ್ನೂ ಉತ್ತಮರಾಗಿದ್ದಾರೆ ಎಂದು ಅಶುತೋಷ್ ಹೇಳಿದ್ದಾರೆ.

“ನನ್ನ ಸ್ವಂತ ಅನುಭವದಿಂದ ನಾನು ಮಾತನಾಡಬಲ್ಲೆ. ದೆಹಲಿಯಲ್ಲಿ, ನೀವು ಯಾವುದೇ ಸ್ಥಳೀಯ ಹಿಂದಿ ಪತ್ರಿಕೆಗಳು ಅಥವಾ ಇಂಗ್ಲಿಷ್ ಪತ್ರಿಕೆಗಳೊಂದಿಗೆ ಮಾತನಾಡಿದರೆ, ಎಲ್ಲಾ ಸಂಪಾದಕರು ಬಾಯಿ ಮುಚ್ಚುತ್ತಾರೆ. ಅವರು ಅವರಿಗೆ (ಅರವಿಂದ್ ಕೇಜ್ರಿವಾಲ್) ತುಂಬಾ ಹೆದರುತ್ತಾರೆ ಮತ್ತು ಅವರು ಅರವಿಂದ್ ಕೇಜ್ರಿವಾಲ್ ಗೆ ವಿರೋಧಿಯಾದ ಯಾವುದೇ ಕಥೆಯನ್ನು ಮೊದಲ ಪುಟದಲ್ಲಿ ಪ್ರಕಟಿಸುವುದಿಲ್ಲ” ಎಂದು ಅಶುತೋಷ್‌ ಹೇಳಿದ್ದಾರೆ.

ಮುಂದುವರಿದು ಅವರು “ಅವರು ಕೇಜ್ರಿವಾಲ್ ವಿರೋಧಿ ಕಥೆಯನ್ನು ಪ್ರಕಟಿಸಿದರೆ, ಅಕ್ಷರಶಃ ಮರುದಿನವೇ ಜಾಹೀರಾತನ್ನು ಹಿಂತೆಗೆದುಕೊಳ್ಳಲಾಗುತ್ತದೆ ಅಥವಾ ಯಾವುದೋ ನೆಪದಿಂದ ವಿಧಾನಸಭೆ ಸಮಿತಿಯು ಅವರನ್ನು ಕರೆದು ಅವರನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದ್ದರಿಂದ ಆ ಅರ್ಥದಲ್ಲಿ ನೋಡುವುದಾದರೆ ಅತ್ಯುತ್ತಮ ನಿರ್ವಹಣೆಯಾಗಿದೆ, ಮತ್ತು ಪಂಜಾಬ್ ಗೆದ್ದ ನಂತರ, ಅವರು ಮಾಧ್ಯಮ ನಿರ್ವಹಣೆಯ ವಿಷಯದಲ್ಲಿ ಸಾಕಷ್ಟು ಹಣವನ್ನು ವ್ಯಯಿಸುತ್ತಿದ್ದು ಮಾಧ್ಯಮಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ ಎಂದು ಒಪಿಂಡಿಯಾದ ವರದಿ ಉಲ್ಲೇಖಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!