ಕುರ್ಚಿ ವಿಚಾರಕ್ಕೆ ನಡು ರಸ್ತೆಯಲ್ಲಿ ಯುವತಿಯರ ಮಾರಾಮಾರಿ: ಹೊಡೆದಾಟದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರದಲ್ಲಿ ನಡುರಸ್ತೆಯಲ್ಲಿಯೇ ನಾಲ್ವರು ಹೆಣ್ಣುಮಕ್ಕಳ ಜಡೆಜಗಳ ಎಲ್ಲೆಡೆ ವೈರಲ್‌ ಆಗುತ್ತಿದೆ. ನಾಸಿಕ್‌ನ ಕಾಲೇಜೊಂದರ ವಿದ್ಯಾರ್ಥಿಗಳು ತರಗತಿ ಮುಗಿಸಿ ಕ್ಯಾಂಟೀನ್‌ಗೆ ತೆರಳಿದ್ದರು. ಈ ವೇಳೆ ಕ್ಯಾಂಟೀನ್‌ನಲ್ಲಿ ಕೂರುವ ವಿಚಾರವಾಗಿ ಪರಸ್ಪರ ಜಗಳವಾಡಿದ್ದಾರೆ. ಯುವತಿಯರ ವಾಗ್ವಾದ ವಿಕೋಪಕ್ಕೆ ಹೊಡೆದಾಟ ಶುರು ಮಾಡಿದ್ದಾರೆ. ಅಷ್ಟರಲ್ಲಿ ಕ್ಯಾಂಟೀನ್ ಸಿಬ್ಬಂದಿ ಎಲ್ಲರನ್ನು ಹೊರಹಾಕಿದ್ದಾರೆ. ಆಚೆ ಬಂದ ವಿದ್ಯಾರ್ಥಿಗಳು ರಸ್ತೆಯಲ್ಲಿ ಇದ್ದೇವೆ ಎಂಬುದೇ ಮರೆತು ಕೆಟ್ಟದಾಗಿ ಬೈದಾಡಿದರುವುದು ವಿಡಿಯೋದಲ್ಲಿದೆ.

ಮೂವರು ಹುಡುಗಿಯರು ಒಬ್ಬಳನ್ನು ಸುತ್ತುವರಿದು ಕೂದಲು ಹಿಡಿದು ಮನಸೋ ಇಚ್ಛೆ ಥಳಿಸಿದ್ದು, ಸುತ್ತಲಿದ್ದ ಇತರರು ಜಗಳ ಬಿಡಿಸದೆ, ವಿಡಿಯೋ ಮಾಡುತ್ತಾ ಸಿನಿಮಾದಂತೆ ವೀಕ್ಷಿಸಿದಂತೆ ವೀಕ್ಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!