Saturday, January 28, 2023

Latest Posts

ಕೇಸರಿ ವಸ್ತ್ರಧಾರಿಗಳು ಯಾವುದೇ ಕೆಟ್ಟ ಕೆಲಸ ಮಾಡಿಲ್ವಾ? Boycott ಪಠಾಣ್‌ಗೆ ಪ್ರಕಾಶ್ ರಾಜ್ ಖಡಕ್ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣ್ ಅಭಿನಯದ ಪಠಾಣ್ ಸಿನಿಮಾಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಕೇಸರಿ ಬಿಕಿನಿ ತೊಟ್ಟು ಬೇಷರಮ್ ರಂಗ್ ಎಂದು ಅಣಕ ಮಾಡಿದ್ದಾರೆ ಎಂದು ವರ್ಗದ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಸಿನಿಮಾ ರಿಲೀಸ್ ಮಾಡಬಾರದು ಎಂದು ಪಟ್ಟು ಹಿಡಿದಿದ್ದಾರೆ.

ಇಂದೋರ್‌ನಲ್ಲಿ ಎಸ್‌ಆರ್‌ಕೆ ಪ್ರತಿಕೃತಿಯನ್ನು ಸುಟ್ಟು ಪ್ರತಿಭಟನೆ ಮಾಡಲಾಗುತ್ತಿದೆ. ಈ ಬೆನ್ನಲ್ಲೇ ಪ್ರಕಾಶ್ ರಾಜ್ ಮಾತನಾಡಿದ್ದು, ಹಾಗಾದರೆ ಕೇಸರಿ ವಸ್ತ್ರ ಧರಿಸಿ ಅತ್ಯಾಚಾರ ಎಸಗುವುದು, ದ್ವೇಷ ಭಾಷಣ ಮಾಡುವುದು, ರಾಜಕಾರಣಿಗಳೇ ದಲ್ಲಾಳಿಗಳಾಗುವುದು, ಕೇಸರಿ ವಸ್ತ್ರಧಾರಿ ಸ್ವಾಮೀಜಿ ಅಪ್ರಾಪ್ತ ವಯಸ್ಕರ ಮೇಲೆ ಅತ್ಯಾಚಾರ ಎಸಗಿದರೆ ಪರವಾಗಿಲ್ಲ, ಆದರೆ ಸಿನಿಮಾದಲ್ಲಿ ಮಾತ್ರ ಈ ಬಣ್ಣದ ಬಟ್ಟೆ ಹಾಕೋ ಹಾಗಿಲ್ಲ ಏಕೆ? ಸುಮ್ಮನೆ ಪ್ರಶ್ನಿಸಿದೆ ಅಷ್ಟೆ ಎಂದಿದ್ದಾರೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!