Saturday, April 1, 2023

Latest Posts

ಕುಡಿಯುವ ನೀರಿನ ಬಾವಿಗಳಲ್ಲಿ ಕಂಡು ಬಂದ ಡಿಸೇಲ್: ಪುರಸಭೆಗೆ ದೂರು

ಹೊಸದಿಗಂತ ವರದಿ,ಅಂಕೋಲಾ:

ಪಟ್ಟಣದ ಮಠಾಕೇರಿ ಕ್ರಾಸ್ ಬಳಿ ಕುಡಿಯುವ ನೀರಿನ ಬಾವಿಗಳಲ್ಲಿ ಡಿಸೇಲ್ ಕಂಡು ಬಂದಿದ್ದು ಕಂಗಾಲಾದ ಮನೆ ಮಾಲಿಕರು ಪುರಸಭೆಗೆ ದೂರು ನೀಡಿದ್ದಾರೆ.
ಮಠಾಕೇರಿ ಕ್ರಾಸ್ ಬಳಿಯ ಗಣಪತಿ ವೆಂಕಟ್ರಮಣ ಕಿಣಿ ಮತ್ತು ಸಂತೋಷ ಗಣೇಶ ನಾಯಕ ಎನ್ನುವವರ ಎರಡು ಬಾವಿಗಳಲ್ಲಿ ಕಳೆದ 3 ದಿನಗಳಿಂದ ನೀರಿಗೆ ಡಿಸೇಲ್ ವಾಸನೆ ಬರಲಾರಂಭಿಸಿದ್ದು ನೀರನ್ನು ಕುಡಿಯಲಾಗದ ಪರಿಸ್ಥಿತಿ ಇದೆ.
ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಎನ್. ಎಂ.ಮೇಸ್ತ,ಆಹಾರ ನಿರೀಕ್ಷಕ ನವೀನ ನಾಯ್ಕ, ಪುರಸಭೆ ನೀರು ಸರಬರಾಜು ಅಧಿಕಾರಿ ಆನಂದು ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಬಾವಿಗಳ ಪರಿಶೀಲನೆ ನಡೆಸಿದ್ದು ನೀರು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ಸಮೀಪದಲ್ಲಿ ಇರುವ ಡಿಸೇಲ್ ಪಂಪ್ ನಿಂದ ಡಿಸೇಲ್ ಬಂದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!