Monday, March 27, 2023

Latest Posts

ದಿನಭವಿಷ್ಯ| ವೈಯಕ್ತಿಕ ಬದುಕಿನಲ್ಲಾಗುವ ಕೆಲ ಬದಲಾವಣೆಗಳು ಮಾನಸಿಕ ಬೇಗುದಿಗೂ ಕಾರಣವಾದೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ವೈಯಕ್ತಿಕ ಬದುಕಿನಲ್ಲಿ ಆಗುವ  ಕೆಲವು ಬದಲಾವಣೆಗಳು ಮಾನಸಿಕ ಬೇಗುದಿಗೂ ಕಾರಣವಾದೀತು. ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ.

ವೃಷಭ
ಕಾರ್ಯದಲ್ಲಿ ಅಪಯಶಸ್ಸು. ಮಾನಸಿಕ ತೊಳಲಾಟ. ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಖರ್ಚು ಮಾಡಿರಿ. ಒಟ್ಟಿನಲ್ಲಿ ನೆಮ್ಮದಿಯಿರದ ದಿನ.

ಮಿಥುನ
ಹೊರಜಗತ್ತಿನ ಜತೆ ಹೆಚ್ಚು ವ್ಯವಹರಿಸಿ. ಅಂತರ್ಮುಖಿಯಾಗಿ ಕೂರದಿರಿ. ಇದು  ಇಂದಿನ ದಿನಕ್ಕೆ ನಿಮಗೆ ಸಲಹೆ. ಅನವಶ್ಯ ಕೊರಗುವಿಕೆ ಬಿಡಿ.

ಕಟಕ
ವೃತ್ತಿ ಕ್ಷೇತ್ರದಲ್ಲಿ ವದಂತಿಗಳಿಂದ ದೂರವಿರಿ. ಅವು ನಿಮಗೆ ಹಾನಿ ಮಾಡಬಹುದು. ಮನೆಯ ಸದಸ್ಯರ ಜತೆ ಸಹನೆಯಿಂದ ವರ್ತಿಸಿರಿ.  ಸಂಘರ್ಷ ಬೇಡ.

ಸಿಂಹ
ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು. ಆರೋಗ್ಯಕರ ಆಹಾರವನ್ನೆ ಸೇವಿಸಿರಿ.  ಕೌಟುಂಬಿಕ ಪರಿಸರ ಸೌಹಾರ್ದದಾಯಕ.  ಧನವ್ಯಯ ಹೆಚ್ಚಳ.

ಕನ್ಯಾ
ಮಾತುಕತೆಯಿಂದ ವೈಮನಸ್ಸು ಪರಿಹಾರ ಸುಲಭ. ಇದನ್ನು ನೀವು ಅರಿಯುವುದು ಒಳಿತು. ಸಂಘರ್ಷದ ನೀತಿ ಮುಂದುವರಿಸದಿರಿ. ಭಾವುಕ ಸನ್ನಿವೇಶ.

ತುಲಾ
ಅವಿವಾಹಿತರಿಗೆ ವೈವಾಹಿಕ ಸಂಬಂಧ ಕೂಡಿಬಂದೀತು. ನಿಮ್ಮ ಶೋಧ ಫಲ ಕಾಣಬಹುದು. ಆರ್ಥಿಕ ಒತ್ತಡ ಹೆಚ್ಚು, ಖರ್ಚು ಅಧಿಕ.

ವೃಶ್ಚಿಕ
ಗೋಮುಖ ವ್ಯಾಘ್ರಗಳ ಕುರಿತು ಎಚ್ಚರದಿಂದಿರಿ. ನಯವಾಗಿ ಮಾತನಾಡಿ ನಿಮ್ಮ ಬೆನ್ನ ಹಿಂದೆ ಇರಿಯುತ್ತಾರೆ. ನಿಮ್ಮ ಹಿತಾಸಕ್ತಿಗೆ ಅವರಿಂದ ಸಮಸ್ಯೆಯಿದೆ.

ಧನು
ವೃತ್ತಿ ಕ್ಷೇತ್ರದಲ್ಲಿ ಜಗಳದಿಂದ ದೂರವಿರಿ. ನಿಮ್ಮ ಸಾಧನೆಗೆ ನೀವೇ ಮುಂದಾಗಬೇಕು. ಇತರರನ್ನು ಅವಲಂಬಿಸದಿರಿ. ಆರ್ಥಿಕ ವ್ಯಯ.

ಮಕರ
ನಿಮ್ಮ ಮೇಲೆ ದೊಡ್ಡ ಹೊಣೆಗಾರಿಕೆ ಹೇರಲ್ಪಡುವುದು. ಅದನ್ನು ನಿಭಾಯಿಸು ವುದು ಅನಿವಾರ್ಯ. ಮಾನಸಿಕವಾಗಿ ತುಂಬಾ ಕುಗ್ಗುವಿರಿ.

ಕುಂಭ
ಮಾನಸಿಕ ತುಮುಲ. ಕ್ಲಿಷ್ಟಕರ ವಿಚಾರದಲ್ಲಿ ನಿಮ್ಮ ಅಂತಃಸಾಕ್ಷಿಯ ಪ್ರಕಾರ ನಡಕೊಳ್ಳಿ. ಅಂತಿಮವಾಗಿ ನಿಮಗೆ ಅದರಿಂದ ಒಳಿತೇ ಆಗುವುದು.

ಮೀನ
ಭಾವನಾತ್ಮಕತೆ ದೂರವಿಟ್ಟು ಪ್ರಾಕ್ಟಿಕಲ್ ಆಗಿ ಚಿಂತಿಸಿ. ಇಲ್ಲವಾದರೆ ಮಾನಸಿಕ ನೋವು ತಿನ್ನುವಿರಿ. ಆಪ್ತ ಸಂಬಂಧದಲ್ಲಿ ಬಿರುಕು ಸಂಭವ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!