ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ದಕ್ಷಿಣ ಆಫ್ರಿಕಾ ಮಾಜಿ ಕ್ಯಾಪ್ಟನ್ ಬೆಹಾರ್ಡಿಯನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದಕ್ಷಿಣ ಆಫ್ರಿಕಾದ ಕ್ರಿಕೆಟ್ ಸೀಮಿತ ಓವರ್‌ ಮಾದರಿಯ ಸ್ಪೆಷಲಿಸ್ಟ್ ಮತ್ತು ಟಿ 20 ಮಾಜಿ ನಾಯಕ ಫರ್ಹಾನ್ ಬೆಹಾರ್ಡಿಯನ್ ಮಂಗಳವಾರ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
59 ಏಕದಿನ ಮತ್ತು 38 ಟಿ.20 ಗಳನ್ನು ಆಡಿರುವ 39 ವರ್ಷ ವಯಸ್ಸಿನ ಆಲ್ರೌಂಡರ್ ಬೆಹಾರ್ಡೀನ್‌, 2017 ರಲ್ಲಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಆಫ್ರಿಕಾ ನಾಯಕತ್ವ ವಹಿಸಿದ್ದರು. ಅವರು ಕಳೆದ ಕೆಲ ವರ್ಷಗಳಿಂದ ಆಯ್ಕೆಗಾರರಿಂದ ಕಡೆಗಣಿಸಲ್ಪಟ್ಟಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ನಿವೃತ್ತಿ ನಿರ್ಧಾರ ಪ್ರಕಟಿಸಿರುವ ಬೆಹರ್ಡೀನ್‌, 18 ವರ್ಷಗಳಿಗೂ ಹೆಚ್ಚು ಕಾಲ ಆಡಿದ ಬಳಿಕ ವೃತ್ತಿಪರ ಕ್ರಿಕೆಟ್ ತ್ಯಜಿಸುವ ನಿರ್ಧಾರ ಕಠಿಣವಾಗಿತ್ತು ಮತ್ತು ಕಳೆದ ಎರಡು ವಾರಗಳು ವಿಶೇಷವಾಗಿ ಅತ್ಯಂತ ಕಠಿಣವಾಗಿದ್ದವು ಎಂದು ಹೇಳಿದ್ದಾರೆ.
ಅವೆರು ಏಕದಿನದಲ್ಲಿ 1074 ರನ್‌ ಮತ್ತು ಟಿ 20 ಅಲ್ಲಿ 518 ರನ್‌ ಗಳಿಸಿದ್ದಾರೆ. ಆದರೆ ದೇಶೀಯ ಕ್ರಿಕೆಟ್‌ನಲ್ಲಿ ಅವರ ಅಂಕಿ ಅಂಶಗಳು ಅತ್ಯತ್ತಮವಾಗಿವೆ. ಬೆಹರ್ಡಿಯನ್ 2004 ರಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದು, 125 ಪಂದ್ಯಗಳಲ್ಲಿ 7,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 150 ರನ್ ಅವರ ಅತ್ಯಧಿಕ ರನ್‌ ಗಳಿಕೆಯಾಗಿದೆ. ಅವರು 2012, 2014 ಮತ್ತು 2016 ರಲ್ಲಿ ಆಪ್ರಿಕಾದ T20 ವಿಶ್ವಕಪ್ ಅಭಿಯಾನದ ಭಾಗವಾಗಿದ್ದರು ಮತ್ತು 2015 ರಲ್ಲಿ  ಏಕದಿನ ವಿಶ್ವಕಪ್‌ನ ಭಾಗವಾಗಿದ್ದರು. ಅವರು ಕೊನೆಯ ಬಾರಿಗೆ ದಕ್ಷಿಣ ಆಫ್ರಿಕಾಕ್ಕೆ ನವೆಂಬರ್ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕ್ಯಾರಾರಾದಲ್ಲಿ ಟಿ 20ಯಲ್ಲಿ ಪ್ರತಿನಿಧಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!