‌ಫುಟ್ಬಾಲ್‌ ದಿಗ್ಗಜ ಸುನೀಲ್ ಚೆಟ್ರಿಗೆ ವೇದಿಕೆ ಮೇಲೆ ದೊಡ್ಡ ಅಪಮಾನ: ಬಂಗಾಳ ಗವರ್ನರ್‌ ವಿರುದ್ಧ ಕ್ರೀಡಾಭಿಮಾನಿಗಳ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ 2-1 ಗೋಲುಗಳಿಂದ ಜಯಗಳಿಸುವ ಮೂಲಕ ಬೆಂಗಳೂರು ಎಫ್‌ಸಿ ಮೊಟ್ಟಮೊದಲ ಡ್ಯುರಾಂಡ್ ಕಪ್ ಪ್ರಶಸ್ತಿಗೆ ಮುತ್ತಿಕ್ಕಿದೆ. ತಂಡವನ್ನು ಪ್ರಶಸ್ತಿಯೆಡೆಗೆ ಮುನ್ನಡೆಸಿದ ದಿಗ್ಗಜ ಆಟಗಾರ ಸುನಿಲ್ ಛೆಟ್ರಿ ತಮ್ಮ ಮುಡಿಗೆ ಮತ್ತೊಂದು ಗರಿಯನ್ನು ಸೇರ್ಪಡೆಗೊಳಿಸಿಕೊಂಡಿದ್ದಾರೆ.
ಬೆಂಗಳೂರು ಎಫ್‌ಸಿ ಈ ಹಿಂದೆ ಐ-ಲೀಗ್ (2014 ಮತ್ತು 2016), ಫೆಡರೇಷನ್ ಕಪ್ (2015 ಮತ್ತು 2017), ಸೂಪರ್ ಕಪ್ (2018) ಮತ್ತು ಇಂಡಿಯನ್ ಸೂಪರ್ ಲೀಗ್ (2019) ನಲ್ಲಿ ಟ್ರೋಫಿಗಳನ್ನು ಎತ್ತಿ ಹಿಡಿದಿತ್ತು. ಈದೀಗ ಡ್ಯೂರಾಂಡ್‌ ಕಪ್‌ ಗೆಲ್ಲುವ ಮೂಲಕ ಮತ್ತೊಂದು ದೊಡ್ಡ ಸಾಧನೆಗೆ ಭಾಜನವಾಗಿದೆ. ಅದಾಗ್ಯೂ, ಟ್ರೋಫಿ ಸ್ವೀಕರಿಸುವಾಗ ನಡೆದ ಘಟನೆಯೊಂದು ವಿವಾದವಾಗಿ ಮಾರ್ಪಟ್ಟಿದ್ದು ದೇಶಾದ್ಯಂತ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪಂದ್ಯದ ನಂತರ ಟ್ರೋಫಿ ಪ್ರದಾನ ಸಮಾರಂಭದ ವೇಳೆ ಈ ಘಟನೆ ನಡೆದಿದೆ. ಬೆಂಗಳೂರಿನ ನಾಯಕ ಚೆಟ್ರಿಗೆ ಟ್ರೋಫಿ ಹಸ್ತಾಂತರಿಸುವಾಗ ಲಾ. ಗಣೇಶನ್ ಅವರು ಹಿಂದೆ ಸ್ವಲ್ಪ ಹಿಂದೆ ನಿಂತಿದ್ದರು. ಕ್ಯಾಮೆರಾ ಕಾಣುತ್ತಿದ್ದಂತೆ ಮುನ್ನಗಿದ ಅಯ್ಯರ್‌ ಸುನಿಲ್ ಛೆಟ್ರಿಯವರನ್ನು ದೂರ ತಳ್ಳಿ ತಾವು ಕ್ಯಾಮೆರಾದ ಎದುರಿಗೆ ಬರುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ರಾಜಕಾರಣಿಯ ಕೃತ್ಯಕ್ಕೆ ಅಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸುನೀಲ್‌ ಚೆಟ್ರಿ ಭಾರತೀಯ ಫುಟ್ಬಾಲ್‌ ಗೊಂದು ಘನತೆ ತಂದ ಆಟಗಾರ. ಅಂತರಾಷ್ಟ್ರೀಯ ಮಟ್ಟದಲ್ಲಿ ಅವರ ಸಾಧನೆಗಳು ಅಪ್ರತಿಮ. ಇಡೀ ದೇಶವೇ ಅವರನ್ನು ಗೌರವಿಸುತ್ತದೆ. ಅಂತಹದ್ದರಲ್ಲಿ ಅಯ್ಯರ್‌ ಕ್ಷಲ್ಲಕ ರೀತಿಯಲ್ಲಿ ಚೆಟ್ರಿ ಭುಜಹಿಡಿದು ತಳ್ಳಿರುವುದು ಅವರ ದುರಂಹಂಕಾರವನ್ನು ತೋರಿಸುತ್ತದೆ. ಇದೊಂದು ನಾಚಿಕೆಗೇಡಿನ ನಡವಳಿಕೆ, ಅಯ್ಯರ್‌ ಸಣ್ಣಬುದ್ದಿ ಪ್ರದರ್ಶಿಸಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಘಟನೆಯನ್ನು ಖಂಡಿಸಿದ್ದಾರೆ ಮತ್ತು “ಇದು ಅವಮಾನಕರ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂ ಆಟಗಾರರಿಗೆ ಅಪಮಾನವಾಗುತ್ತಿರುವುದು ಇದೇ ಮೊದಲೇನಲ್ಲ.ಈ ಹಿಂದೆ ಪ್ರೆಸೆಂಟೇಶನ್ ಸಮಯದಲ್ಲಿ ಪ್ರೆಸಿಡೆಂಟ್ಸ್ ಕಪ್ ಸ್ವೀಕರಿಸುತ್ತಿದ್ದ ಆಟಗಾರ ಶಿವಶಕ್ತಿ ನಾರಾಯಣನ್ ಅವರನ್ನು ಪಶ್ಚಿಮ ಬಂಗಾಳದ ಕ್ರೀಡಾ ಅರೂಪ್ ಬಿಸ್ವಾಸ್ ಅವರು ತಳ್ಳಿದ್ದ ಘಟನೆಯೂ ನಡೆದಿತ್ತು.
ಏತನ್ಮಧ್ಯೆ, ಶಿವ ಶಕ್ತಿ ಮತ್ತು ಬ್ರೆಜಿಲ್‌ ಆಟಗಾರ ಅಲನ್ ಕೋಸ್ಟಾ ವಿಜೇತ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಪರವಾಗಿ ಗೋಲು ಗಳಿಸಿದರೆ, ಮುಂಬೈ ಸಿಟಿ ಎಫ್‌ಸಿ (ಎಂಸಿಎಫ್‌ಸಿ) ಪರ ಅಪುಯಾ ಏಕೈಕ ಗೋಲು ಹೊಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!