Sunday, October 2, 2022

Latest Posts

ನಾಯಿಯನ್ನು ಕಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಕಿರಾತಕ: ಅಮಾನುಷ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾರಿಗೆ ಸರಪಳಿಯಿಂದ ನಾಯಿಯನ್ನು ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತೀಯ ಜನತಾ ಪಕ್ಷದ ನಾಯಕಿ ಮತ್ತು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮೇನಕಾ ಗಾಂಧಿ ಅವರ ದೂರಿನ ಮೇರೆಗೆ ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವರದಿ ಪ್ರಕಾರ ಭಾನುವಾರ ರಾಜಸ್ಥಾನದ ಜೋಧ್‌ಪುರದಲ್ಲಿ ಡಾ ರಜನೀಶ್ ಗಾಲ್ವಾ ಎಂಬ ವೈದ್ಯ ಎಂಜಿಎಚ್‌ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. ಎಸ್‌ಎನ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ದಿಲೀಪ್ ಕಚ್ವಾಹಾ ಅವರು ಆರೋಪಿ ವೈದ್ಯರಿಗೆ ಶೋಕಾಸ್ ನೋಟಿಸ್ ನೀಡಿದ್ದು, 24 ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೋರಿದ್ದಾರೆ. ಪ್ರಕರಣದ ಬೆನ್ನಲ್ಲೇ ಪುಕಾರ್ ಅನಿಮಲ್ ಎನ್‌ಜಿಒ ಕೂಡ ಶಾಸ್ತ್ರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

ರಸ್ತೆಯಲ್ಲಿ ಎಳೆದೊಯ್ದರಿಂದ ನಾಯಿಯ ಕಾಲುಗಳ ಮೂಳೆ ಮುರಿದಿದೆ. ಎನ್‌ಜಿಒ ಮಾಹಿತಿ ಮೇರೆಗೆ ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನಾಯಿಯನ್ನು ಚಿಕಿತ್ಸೆಗೆ ಕಳುಹಿಸಿದ್ದಾರೆ. ಕಾರನ್ನು ತಡೆಯಲು ಪ್ರಯತ್ನಿಸಿದವರ ಮೇಲೆ ವೈದ್ಯ ಕಾರು ಹತ್ತಿಸಲು ಮುಂದಾಗಿರವುದಾಗಿ ಸ್ಥಳೀಯರು ಆರೋಪಿಸಿದರು. ಕೂಡಲೇ ವೈದ್ಯನ ಡ್ರೈವಿಂಗ ಲೈಸೆನ್ಸ್‌ ರದ್ದು ಮಾಡಿ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹ ವ್ಯಕ್ತವಾಗಿದೆ.

ಆದರೆ ಈ ಕುರಿತು ವೈದ್ಯ ಹೇಳೋದೇ ಬೇರೆ, ನಾಯಿ ಆಗಾಗ ಮನೆಗೆ ನುಗ್ಗಿ ಬೊಗಳುತ್ತಲೇ ಇರುತ್ತದೆ. ಇದರ ಕಾಟ ಅತಿಯಾದ್ದರಿಂದ ಪಾಲಿಕೆ ಆವರಣದಲ್ಲಿ ನಾಯಿಯನ್ನು ಬಿಡಲು ಹೊರಟಿದ್ದಾಗೆ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!