ಅರ್ಹರಿಗೆ ಶೀಘ್ರವೇ ನಿವೇಶನ ಹಕ್ಕುಪತ್ರ ವಿತರಣೆ: ಶಾಸಕ ಅಪ್ಪಚ್ಚು ರಂಜನ್

ಹೊಸದಿಗಂತ ವರದಿ, ಕುಶಾಲನಗರ
ಈಗಾಗಲೇ ಎರಡು ತಾಲೂಕುಗಳಲ್ಲಿ ಸಾವಿರಾರು ಕುಟುಂಬದವರಿಗೆ ನಿವೇಶನದ ಹಕ್ಕು ಪತ್ರ ಮತ್ತು ವಿವಿಧ ಯೋಜನೆಯ ಅಡಿಯಲ್ಲಿ ಮನೆಗಳ ನಿರ್ಮಾಣಕ್ಕೆ ಅವಕಾಶವನ್ನು ಒದಗಿಸಲಾಗಿದ್ದು, ಅದೇ ರೀತಿ ‌ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಿರುವ ಅರ್ಹ ನಿವೇಶನ ರಹಿತರಿಗೆ ಕಂದಾಯ ಇಲಾಖೆ ನಿಯಮನುಸಾರ ವಸತಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ. ಪಿ.ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಕೂಡಿಗೆಗೆ ಭೇಟಿ ನೀಡಿದ ಸಂದರ್ಭ ನಿವೇಶನ ರಹಿತರು ಸಲ್ಲಿಸಿದ ಮನವಿಗೆ ಸ್ಪಂದಿಸಿ ಮಾತನಾಡಿದ ಅವರು, ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಮತ್ತು ಹುದುಗೂರುಗಳಲ್ಲಿ ಈಗಾಗಲೇ ನಿಗದಿಯಾದ ಸ್ಧಳದಲ್ಲಿ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನವನ್ನು ಕಂದಾಯ ಇಲಾಖೆಯ ನಿಯಮನುಸಾರವಾಗಿ ನೀಡಲಾಗುವುದು ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎರಡು ಕಡೆಗಳಲ್ಲಿ ಜಾಗ ಗುರುತಿಸಲಾಗಿದ್ದು, ಸ್ಥಳೀಯ ಮತ್ತು ಕಂದಾಯ ಇಲಾಖೆ ದಾಖಲೆಗಳ ಅಧಾರದ ಮೇಲೆ ಸ್ಧಳ ಪರಿಶೀಲನೆ ನಡೆಸಿ ನಿವೇಶನವನ್ನು ನೀಡಲಾಗುವುದು ಎಂದು ನುಡಿದರು.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಕಾದಿರಿಸುವ ಎರಡು ಎಕರೆಗಳಷ್ಟು ಪ್ರದೇಶದಲ್ಲಿ ವಸತಿ ರಹಿತರಿಗೆ ನಿವೇಶನ ನೀಡುವ ಸಲುವಾಗಿ ಕಂದಾಯ ಇಲಾಖೆಯ ವತಿಯಿಂದ ಸರ್ವೆ ಕಾರ್ಯ ನಡೆದಿದೆ. ಅದರಂತೆ ಗ್ರಾಮ ಪಂಚಾಯತಿಯ ಗ್ರಾಮ ಸಭೆ, ಮತ್ತು ಮಾಸಿಕ ಸಭೆಯಲ್ಲಿ ಅಯ್ಕೆಯಾದ ಫಲಾನುಭವಿಗಳಿಗೆ ನೀಡಲು ಈಗಾಗಲೇ ಪಟ್ಟಿ ತಯಾರಾಗಿದೆ. ಅದಕ್ಕನುಗುಣವಾಗಿ ಅರ್ಹ ಫಲಾನುಭವಿಗಳಿಗೆ ಅತಿ ಶೀಘ್ರದಲ್ಲಿ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.
ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮಕ್ಕೂ‌ ಶಾಸಕರು ಭೇಟಿ ನೀಡಿದರು.
ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಚಂದ್ರು ಮೂಡ್ಲಿ ಗೌಡ, ಕೂಡುಮಂಗಳೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮೀಣ್, ಮಂಜುನಾಥ ಸೇರಿದಂತೆ ಬೂತ್ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!