ಜೈಲಿಂದ ಬಿಡುಗಡೆಯಾದ ‘ಝೋಂಬಿ ಏಂಜಲಿನಾ ಜೋಲಿ’, ನಿಜವಾಗಿಯೂ ಇವರು ಹೇಗಿದ್ದಾರೆ ನೋಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೇಮಸ್ ಆಗೋಕೆ ಕಷ್ಟಪಟ್ಟು ಕೆಲಸ ಮಾಡುವ ಜನ ಒಂದಿಷ್ಟಿದ್ದರೆ, ಏನಾದರೂ ಅಡ್ಡದಾರಿ ಹಿಡಿದು ಫೇಮಸ್ ಆಗೋಕೆ ನೋಡೋರು ಇದ್ದಾರೆ. ನಟಿ ಏಂಜಲೀನಾ ಜೋಲಿ ಹೋಲುವ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಏಕಾಏಕಿ ಫೇಮಸ್ ಆಗಿದ್ದ ಸಹರ್ ತಬರ್ ಇದೀಗ ತಮ್ಮ ನಿಜವಾದ ಮುಖವನ್ನು ರಿವೀಲ್ ಮಾಡಿದ್ದಾರೆ.

ಭ್ರಷ್ಟಾಚಾರ ಹಾಗೂ ನಿಂದನೆ ಆರೋಪದಲ್ಲಿ ಜೈಲು ಸೇರಿದ್ದ ಸೆಹೆರ್‌ನನ್ನು 14 ತಿಂಗಳ ನಂತರ ಬಿಡುಗಡೆ ಮಾಡಲಾಗಿದೆ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಹೀಗೆ ಆಗಿದ್ದಾರೆ ಎಂದು ನೆಟ್ಟಿಗರು ತಿಳಿದಿದ್ದರು. ಆದರೆ ಇದರಲ್ಲಿ ಎಲ್ಲವೂ ನಿಜವಲ್ಲ.

Iran's 'zombie Angelina Jolie' reveals real face after release from jail in blasphemy case - India Todayಇವರನ್ನು ಬಂಧಿಸಿ, ಜೈಲು ಶಿಕ್ಷೆ ವಿಧಿಸಿದಾಗ ನೆಟ್ಟಿಗರು ಈಕೆಯ ಬಿಡುಗಡೆಗೆ ಬೆಂಬಲ ಸೂಚಿಸಿದ್ದರು. ಏಂಜಲೀನಾ ಜೂಲಿ ಅವರಿಗೆ ಕೆಲವರು ಮನವಿ ಮಾಡಿದ್ದು, ತಮಾಷೆ ಮಾಡಲು ಹೋಗಿ ಯುವತಿ ಜೈಲು ಪಾಲಾಗಿದ್ದಾಳೆ. ಅವಳನ್ನು ಬಿಡಿಸಿ ಎಂದು ಕೇಳಿಕೊಂಡಿದ್ದರು.

Iranian 'Zombie Angelina Jolie' Seen for the First Time After Jail Release | Al Bawabaಇದೀಗ ಆಕೆ ಜೈಲಿನಿಂದ ಹೊರಬಂದು ನಿಜ ಹೇಳಿದ್ದಾರೆ. ನಾನು ತುಟಿ, ಮೂಗು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದೇನೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟ ಫೋಟೊಗಳು ಎಡಿಟಿಂಗ್ ಹಾಗೂ ಮೇಕಪ್‌ನದ್ದಾಗಿದೆ ಎಂದು ಹೇಳಿದ್ದಾರೆ. ಈಕೆಯ ರೂಪ ನೋಡಿದ ನೆಟ್ಟಿಗರು ಝೋಂಬಿ ಏಂಜಲಿನಾ ಜೋಲಿ ಎಂದು ಕರೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!