ತನ್ನನ್ನು ತಾನೇ ಮದ್ವೆಯಾದ್ಲು ಸ್ಟಾರ್‌ ನಟಿ.! ದೇಶದಲ್ಲಿ ನಡೀತು ಮತ್ತೊಂದು ಸೋಲೋಗಾಮಿ ವಿವಾಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಹಿರಿತೆರೆ ಹಾಗೂ ಕಿರಿತೆರೆ ಎರಡೂ ಕ್ಷೇತ್ರಗಳಲ್ಲಿ ಪ್ರಖ್ಯಾತಿ ಗಳಿಸಿರುವ ನಟಿ ಕನಿಷ್ಕಾ ಸೋನಿ ತನ್ನ ಮದುವೆ ಸುದ್ದಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.  ಸೋಷಿಯಲ್‌ ಮೀಡಿಯಾದಲ್ಲಿ ವಿವಾಹಿತ ಮಹಿಳೆಯರು ಧರಿಸುವ ʼಸಿಂಧೂರʼ ಮತ್ತು ʼಮಂಗಳಸೂತ್ರʼ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿರುವ ಕನಿಷ್ಕಾ ಸೋನಿ ತನ್ನನ್ನು ತಾನೇ ಮದುವೆಯಾಗಿರುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಕನಿಷ್ಕಾ ಸೋನಿ Instagram ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ ನಲ್ಲಿ, ʼನಾನು ನನ್ನ ಎಲ್ಲಾ ಕನಸುಗಳನ್ನು ಈಡೇರಿಸಿಕೊಳ್ಳಲು ನನ್ನನ್ನೇ ಮದುವೆಯಾಗಿದ್ದೇನೆ. ಮತ್ತು ನಾನು ಪ್ರೀತಿಸುತ್ತಿರುವ ಏಕೈಕ ವ್ಯಕ್ತಿ ನಾನೇ. ನನ್ನ ಅಭಿಮಾನಿಗಳು ಕೇಳುತ್ತಿರುವ ಎಲ್ಲಾ ಪ್ರಶ್ನೆಗಳಿಗೆ ನನ್ನ ಉತ್ತರವೆಂದರೆ, ನನಗೆ ಯಾವುದೇ ಪುರುಷನ ಅಗತ್ಯವಿಲ್ಲ. ನನ್ನೊಂದಿಗೆ ನಾನು ಸುಖವಾಗಿದ್ದೇನೆ. ಏಕಾಂತದಲ್ಲಿ ಬೇಸರವೆನಿಸಿದರೆ ಗಿಟಾರ್‌ ನುಡಿಸುತ್ತಾ ಸಂತೋಷವಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ. ವಿಡಿಯೋ ನೋಡಿ..
ಗುಜರಾತ್‌ನ ಅಹಮದಾಬಾದ್‌ ಮೂಲದ ನಟಿ ಕಾನಿಷ್ಕಾ ದೋ ದಿಲ್ ಏಕ್ ಜಾನ್, ದೇವೋನ್ ಕೆ ದೇವ್… ಮಹಾದೇವ್, ಮಹಾಭಾರತ್, ಪವಿತ್ರಾ ರಿಷ್ಟಾ, ಬೇಗುಸರೈ, ಸಂಕತ್ಮೋಚನ್ ಮಹಾಬಲಿ ಹನುಮಾನ್, ಕುಲ್ಫಿ ಕುಮಾರ್ ಬಜೇವಾಲಾ ಮುಂತಾದ ಹಲವಾರು ಕಿರುತೆರೆ ದಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 2013 ರಲ್ಲಿ ʼಪಥಯೇರಂ ಕೊಡಿʼ ಚಿತ್ರದ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ್ದರು. ನಂತರ ದೇವರಾಯ ಮತ್ತು ಯುವರಾಜಯಂ ಎಂಬ ಚಿತ್ರಗಳಲ್ಲೂ ನಟಿಸಿದ್ದರು.

ಕೊನೆಯ ಬಾರಿಗೆ ʼದೇವಿ ಆದಿ ಪರಾಶಕ್ತಿʼ ಎಂಬ ಟಿವಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರು ಗಂಗಾ ಮಾತೆಯ ಪಾತ್ರವನ್ನು ನಿರ್ವಹಿಸಿದ್ದರು. ಆ ಬಳಿಕ ಅವಳು ಟೆಲಿ ಪ್ರಪಂಚದಿಂದ ನಿರ್ಗಮಿಸುವುದಾಗಿ ಘೋಷಿಸಿದ್ದರು. ಅವರ ಇನ್‌ಸ್ಟಾ ಬಯೋದಲ್ಲಿ ಆಕೆ ಯೋಗ ತರಬೇತುದಾರೆ, ನಟಿ ಮತ್ತು ಗಾಯಕ ಎಂದು ಸೂಚಿಸುತ್ತದೆ. ರಾಮದಾಸ್ ಅಠವಳೆ ಅವರ ರಾಜಕೀಯ ಪಕ್ಷದೊಂದಿಗೆ ಅವರು ರಾಜಕೀಯ ಪ್ರವೇಶಿಸಿದರು.
ಭಾರತದ ಎರಡನೇ ಸೊಲೊಗಮಿ ಪ್ರಕರಣ
ಕಾನಿಷ್ಕಾ ತನ್ನನ್ನು ಮದುವೆಯಾಗುವ ಮೊದಲನೆಯವರೇನಲ್ಲ. ಈ ವರ್ಷದ ಆರಂಭದಲ್ಲಿ ಗುಜರಾತ್ ಹುಡುಗಿ ಕ್ಷಮಾ ಬಿಂದು 2022 ರ ಜೂನ್ 11ರಂದು ಸ್ವತಃ ತನ್ನನ್ನೇ ತಾನು (ಸೊಲೊಗಮಿ) ವಿವಾಹವಾಗಿದ್ದಳು.

ಇದು ಭಾರತದ ಮೊದಲ ಸೋಲೊಗಮಿ ಪ್ರಕರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!