ಆರ್‌ಎಸ್‌ಎಸ್‌ ಬಗ್ಗೆ ಶೀಘ್ರವೇ ತೆರೆಗೆ ಬರಲಿದೆ ಸಿನೆಮಾ, ವೆಬ್ ಸೀರೀಸ್??

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜನಪ್ರಿಯ ಬರಹಗಾರ, ರಾಜಮೌಳಿ ಅವರ ತಂದೆ, ರಾಜ್ಯಸಭಾ ಸದಸ್ಯ ವಿಜಯೇಂದ್ರ ಪ್ರಸಾದ್ ಅವರು ಆರ್‌ಎಸ್‌ಎಸ್‌ ಬಗ್ಗೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ. ಆರ್‌ಎಸ್‌ಎಸ್‌ ರಾಷ್ಟ್ರೀಯ ಒಕ್ಕೂಟದ ಸದಸ್ಯ ರಾಮ್ ಮಾಧವ್ ಬರೆದಿರುವ ‘ದಿ ಹಿಂದುತ್ವ ಪ್ಯಾರಾಡೈಮ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿಜಯೇಂದ್ರ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿಜಯವಾಡದ ಕೆವಿಎಸ್‌ಆರ್ ಸಿದ್ಧಾರ್ಥ ಫಾರ್ಮಾಸ್ಯುಟಿಕಲ್ ಸೈನ್ಸ್ ಕಾಲೇಜಿನಲ್ಲಿ‌ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯೇಂದ್ರ ಪ್ರಸಾದ್, ”ಕೆಲವು ವರ್ಷಗಳವರೆಗೂ ನನಗೂ ಆರ್‌ಎಸ್‌ಎಸ್ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಅದರ ಬಗ್ಗೆ ಒಳ್ಳೆಯ ಅಭಿಪ್ರಾಯವೂ ಇರಲಿಲ್ಲ. ಆದರೆ ಕೆಲವರು ಆರ್‌ಎಸ್‌ಎಸ್‌ ಬಗ್ಗೆ ಸಿನಿಮಾ ಮಾಡುವಂತೆ ಕೇಳಿಕೊಂಡಾಗಿ ನಾನು ಓಕೆ ಅಂದೆ. ಅದರ ಸಲುವಾಗಿ ತಿಳಿಯಲು ನಾನು ಆರ್‌ಎಸ್‌ಎಸ್ ಮುಖ್ಯ ಶಾಖೆ ನಾಗ್ಪುರಕ್ಕೆ ತೆರಳಿದಾಗಲೇ ತಳಿದದ್ದು, ಅದರ ಮಹತ್ವ ಏನು ಅಂತ. ಅಲ್ಲಿ ಅನೇಕ ಸಂಗತಿಗಳನ್ನು ಕೇಳಿದ ನಂತರ, ನನ್ನ ಅಭಿಪ್ರಾಯ ತಪ್ಪಾಗಿದೆ ಎಂಬುದನ್ನು ನಾನು ಅರಿತುಕೊಂಡೆ. ಆರ್‌ಎಸ್‌ಎಸ್ ತಾನು ಮಾಡುವ ಒಳ್ಳೆಯ ಕೆಲಸಗಳ ಬಗ್ಗೆ ಎಲ್ಲೂ ಗುಣಗಾನ ಮಾಡುವುದಿಲ್ಲ, ಆದರೆ ಅದಾಗಬೇಕು. ನಾನು ಈಗಾಗಲೇ RSSಬಗ್ಗೆ ಕಥೆಯನ್ನು ಸಿದ್ಧಪಡಿಸಿದ್ದೇನೆ. ಆ ಕಥೆಯೊಂದಿಗೆ ತೆರಳಿ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ ಕಥೆ ವಿವರಿಸಿದೆ. ಇಡೀ ಕಥೆ ಕೇಳಿ ಮಗುವಿನಂತೆ ನಕ್ಕು ಬೇಗ ಸಿನಿಮಾ ಮಾಡೋಣ ಎಂದರು. ಅತೀ ಶೀಘ್ರದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಕುರಿತು ಸಿನಿಮಾ ಹಾಗೂ ವೆಬ್ ಸಿರೀಸ್ ಮಾಡುವುದಾಗಿ ವಿಜಯೇಂದ್ರ ಪ್ರಸಾದ್ ಸ್ಪಷ್ಟಪಡಿಸಿದರು.

ಆರ್‌ಎಸ್‌ಎಸ್‌ ಸಿನಿಮಾ ಆಗಿರುವುದರಿಂದ ಸಾಕಷ್ಟು ಜನ ಕುತೂಹಲ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್ ಕುರಿತು ಚಲನಚಿತ್ರ ಮಾಡುವುದಾಗಿ ಹೇಳಿದಾಗಿನಿಂದ ಕೆಲ ರಾಜಕೀಯ ಪಕ್ಷಗಳ ನಾಯಕರು ಕೆಂಡವಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!